ಸೋಮವಾರಪೇಟೆ, ಜು.14: ನೇರುಗಳಲೆ ಸರಕಾರಿ ಪ್ರೌಢಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಮೊಬೈಲ್ ಆ್ಯಪ್ (ಇ.ವಿ.ಎಂ) ಬಳಸಿಕೊಂಡು, ಚುನಾವಣೆ ಪ್ರಕ್ರಿಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.ವಿದ್ಯಾರ್ಥಿಗಳು ಆಧಾರ್ ಕಾರ್ಡ್‍ನ್ನು ತಂದು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಲೀಲಾವತಿ ಚುನಾವಣಾ ಅಧ್ಯಕ್ಷಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಇ.ಎಲ್.ಸಿ. ಸಂಚಾಲಕಿ ಸುನೀತ ಆಸಿಯ ಬಾನು ಕಾರ್ಯನಿರ್ವಹಿಸಿದರು. ಶಿಕ್ಷಕರಾದ ತೇಜಾಕ್ಷಿ, ಉಮೇಶ್, ಕೆ.ಆರ್. ರತ್ನಕುಮಾರ್ ಭಾಗಿಯಾಗಿದ್ದರು.