ನಾಪೋಕ್ಲು, ಜು. 13: ಇಲ್ಲಿಗೆ ಸಮೀಪದ ಪಾಲೂರಿನಿಂದ ಕ್ಯಾಮಾಟ್ ರಸ್ತೆಯನ್ನು ಸಂಪರ್ಕಿಸುವ ಬೈತಡ್ಕ ಗದ್ದೆಯ ಪಕ್ಕದಲ್ಲಿ ಮೋರಿಯು ಪೂರ್ಣ ಕುಸಿದು ಬಿದ್ದಿದೆ. ವರ್ಷದ ಹಿಂದೆ ಬೆಟ್ಟಗೇರಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿದ ಮೋರಿಯು ಕುಸಿದಿದ್ದು ರಸ್ತೆ ಮಧ್ಯದಲ್ಲಿ ಹೊಂಡ ಏರ್ಪಟ್ಟಿದೆ. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಶಾಲಾ ವಿದ್ಯಾರ್ಥಿಗಳು ವಾಹನವಿಲ್ಲದೆ ಶಾಲೆಗೆ ತೆರಳಲು ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಳೆಗಾಲದಲ್ಲಿ ತಾತ್ಕಾಲಿಕ ವ್ಯವಸ್ಥೆ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.