ಗೋಣಿಕೊಪ್ಪ ವರದಿ, ಜು. 13: ವೀರಾಜಪೇಟೆ ತಾಲೂಕು ಮೀನುಗಾರಿಕೆ ಇಲಾಖೆ ವತಿಯಿಂದ ಕೃಷಿಕರಿಗೆ ಮೀನುಮರಿ ವಿತರಣೆ ಮಾಡಲಾಯಿತು.
ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಜಾ ಸಾಜಿ, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಪ್ರಿಯಾ ಮರಿಗಳನ್ನು ವಿತರಣೆ ಮಾಡಿದರು. 70 ಸಾವಿರ ಕಾಟ್ಲಾ, 32 ಸಾವಿರ ರೋಹು ಮರಿ ಸೇರಿದಂತೆ ಒಟ್ಟು 1.02 ಲಕ್ಷ ಮೀನು ಮರಿಗಳನ್ನು ಈ ಸಂದರ್ಭ ವಿತರಿಸಲಾಯಿತು. ಸುಮಾರು 32 ಕೃಷಿಕರು ಲಾಭ ಪಡೆದುಕೊಂಡರು.