ನಾಪೋಕ್ಲು, ಜು. 13: ಸ್ಥಳೀಯ ಲಯನ್ಸ್ ಕ್ಲಬ್‍ನ ಪದಗ್ರಹಣ ಸಮಾರಂಭವು ಇಲ್ಲಿನ ಕೊಡವ ಸಮಾಜದಲ್ಲಿ ಜರುಗಿತು. ಲಯನ್ಸ್ ಜಿಲ್ಲಾ ಉಪರಾಜ್ಯಪಾಲ ಡಾ. ಗೀತ್‍ಪ್ರಕಾಶ್ ಪ್ರಮಾಣ ವಚನ ಬೋಧಿಸಿದರು.

ನೂತನ ಅಧ್ಯಕ್ಷರಾಗಿ ಚೌರೀರ ಉದಯ, ಕಾರ್ಯದರ್ಶಿ ಎಂ.ಎಂ. ವಿನಯ್, ಖಜಾಂಚಿ ಕೆ.ಸಿ. ತಿಮ್ಮಯ್ಯ, ನೂತನವಾಗಿ ಕ್ಲಬ್‍ಗೆ ಸೇರ್ಪಡೆಗೊಂಡ ಚೌರೀರ ಪೂಣಚ್ಚ, ಸುಧಿ ಅಯ್ಯಪ್ಪ, ಕೇಲೇಟಿರ ದೀಪು, ಇವರಿಗೆ ಪ್ರಮಾಣವಚನ ಬೋಧಿಸಿ ಅನಿಸಿಕೆ ವ್ಯಕ್ತಪಡಿಸಿದರು.

ಈ ಸಂದರ್ಭ ನೂತನ ಅಧ್ಯಕ್ಷರಿಗೆ ಲಯನ್ಸ್ ಅಧಿಕಾರ ಹಸ್ತಾಂತರಿಸಿದರು. ನೂತನ ಅಧ್ಯಕ್ಷ ಚೌರೀರ ಉದಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಧ್ಯಕ್ಷತೆಯನ್ನು ಎಂ.ಎಂ. ವಿನಯ್ ವಹಿಸಿದ್ದರು. ವೇದಿಕೆಯಲ್ಲಿ ಡಾ. ಗಾಯತ್ರಿ ಪ್ರಕಾಶ್, ಪ್ರಾಂತೀಯ ಅಧ್ಯಕ್ಷ ಪಿ.ಪಿ. ಸೋಮಯ್ಯ, ವಲಯಾಧ್ಯಕ್ಷ ಕೆ.ಕೆ. ದಾಮೋದರ, ಶಾಶ್ವತ್ ಬೋಪಣ್ಣ, ಖಜಾಂಚಿ ಶ್ಯಾಂಬಿದ್ದಪ್ಪ ಉಪಸ್ಥಿತರಿದ್ದರು.

ಅಂಕುರ್ ಶಾಲಾ ವಿದ್ಯಾರ್ಥಿನಿ ಜಸಿತ ಪ್ರಾರ್ಥನೆ, ಇಂದಿರಾ ಅಯ್ಯಣ್ಣ ಧ್ವಜವಂದನೆ, ಎಂ.ಎಂ. ವಿನಯ ಸ್ವಾಗತಿಸಿ, ಕೆ.ಸಿ. ತಿಮ್ಮಯ್ಯ ವರದಿ ವಾಚಿಸಿ, ವಂದಿಸಿದರು.