ಮಡಿಕೇರಿ, ಜು. 13: ಆಶಾಯೇನ್ ಫೌಂಡೇಶನ್ ವತಿಯಿಂದ ಸರ್ಕಾರಿ ಪ್ರೌಢಶಾಲೆ ಕಾನ್‍ಬೈಲ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲೇಖನ ಸಾಮಗ್ರಿ ವಿತರಿಸಿತು. ಶಾಲೆಯ ಮುಖ್ಯಶಿಕ್ಷಕ ಎಂ.ವಿ. ಮಂಜೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುನೀತ ಹಾಜರಿದ್ದರು. ಸಂಧ್ಯಾ ಮತ್ತು ವಿದ್ಯಾ ಪ್ರಾರ್ಥಿಸಿದರು, ಶಿಕ್ಷಕಿ ಪಾರ್ವತಿ ಸ್ವಾಗತಿಸಿದರು.

ಈ ಸಂದರ್ಭ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಎಸ್‍ಡಿಎಮ್‍ಸಿ ಸದಸ್ಯರು ಹಾಜರಿದ್ದರು. ಶಿಕ್ಷಕ ದಿನೇಶ್ ಕಾರ್ಯಕ್ರಮವನ್ನು ನಿರೂಪಿಸಿ, ಸುಮಾ ವಂದಿಸಿದರು.