ಸೋಮವಾರಪೇಟೆ, ಜು. 13: ಶಾಂತಳ್ಳಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಲೋಕೋಪಯೋಗಿ ಇಲಾಖಾ ವತಿಯಿಂದ ನಿರ್ಮಿಸ ಲಾಗಿರುವ ಮೋರಿಯ ಬಳಿ ಮಣ್ಣು ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮೋರಿಗೆ ಅಪಾಯ ಕಂಡುಬಂದಿದೆ.
ಇಲಾಖೆಯ ಮೂಲಕ ರೂ. 4.50 ಲಕ್ಷ ವೆಚ್ಚದಲ್ಲಿ ಮೋರಿ ನಿರ್ಮಿಸಲಾಗಿದ್ದು,ಬದಿಯಲ್ಲಿ ಮಣ್ಣು ತುಂಬಿಸಲಾಗಿದೆ. ಆದರೆ ಇದೀಗ ಬೀಳುತ್ತಿರುವ ಮಳೆಗೆ ನೀರು ಹರಿದು ಮಣ್ಣು ಕೊಚ್ಚಿಕೊಂಡು ಹೋಗಿದೆ. ಲೋಕೋಪಯೋಗಿ ಇಲಾಖೆಯ ರಸ್ತೆಯ ಬದಿಯಲ್ಲಿ ಅವಶ್ಯಕ ಚರಂಡಿ ಇಲ್ಲದೇ ಇರುವದರಿಂದ ರಸ್ತೆಯ ಮೇಲೆ ಹರಿಯುವ ನೀರು ಮೋರಿಗೆ ಸಂಚಕಾರ ತರುವಂತಿದೆ.
ಅಪಾಯಕಾರಿ ಸ್ಥಿತಿಯಲ್ಲಿದ್ದ ಮೋರಿಯನ್ನು ತೆರವುಗೊಳಿಸಿ ಸದ್ಯಕ್ಕೆ ರೂ. 4.50 ಲಕ್ಷ ವೆಚ್ಚದಲ್ಲಿ ನೂತನ ಮೋರಿ ನಿರ್ಮಿಸಲಾಗಿದೆ. ಮಳೆ ಯಿಂದಾಗಿ ಮಣ್ಣು ಕೊಚ್ಚಿಕೊಂಡು ಹೋಗಿರುವದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ.
ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಬಳಸಿ ಮೋರಿಯನ್ನು ವಿಸ್ತರಿಸಲಾಗುವದು ಎಂದು ಲೋಕೋಪಯೋಗಿ ಇಲಾಖೆಯ ಅಭಿಯಂತರ ರಮಣಗೌಡ ಪ್ರತಿಕ್ರಿಯಿಸಿದ್ದಾರೆ.