ಸೋಮವಾರಪೇಟೆ, ಜು. 13: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷ ವೀರೇಂದ್ರ ಹೆಗ್ಗಡೆಯವರ ಆಶಯದಂತೆ ವಿಶೇಷಚೇತನರಿಗೆ ಜನಮಂಗಲ ಕಾರ್ಯಕ್ರಮದಡಿಯಲ್ಲಿ ವಾಟರ್ ಬೆಡ್, ವಾಕರ್ ವೀಲ್ ಚೇರ್, ಊರುಗೋಲು ಸೇರಿದಂತೆ ಇನ್ನಿತರ ಸಲಕರಣೆಗಳನ್ನು ವಿತರಿಸಲಾಯಿತು.

ಸೋಮವಾರಪೇಟೆ ತಾಲೂಕಿನ 74 ವಿಶೇಷಚೇತನರಿಗೆ ಇಂತಹ ಸೌಲಭ್ಯ ಒದಗಿಸಿದ್ದು, ಕೂಲಿ ಮಾಡುತ್ತಿದ್ದ ಸಂದರ್ಭ ಮರ ಬಿದ್ದು ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿರುವ ಗೋಪಾಲಪುರ ಗ್ರಾಮದ ಶಿವಪ್ರಕಾಶ್ ಅವರಿಗೆ ವಾಟರ್ ಬೆಡ್ ವಿತರಿಸಲಾಯಿತು. ಮನೆಯಲ್ಲಿ ತಾಯಿ ಮತ್ತು ಮಗ ಮಾತ್ರ ಇದ್ದು ಆರ್ಥಿಕವಾಗಿ ತೀರಾ ಕಷ್ಟದಲ್ಲಿರುವ ಕುಟುಂಬಕ್ಕೆ ಧರ್ಮಸ್ಥಳ ಯೋಜನೆಯಿಂದ ಈಗಾಗಲೇ ಪ್ರತಿ ತಿಂಗಳು ರೂ.750 ಮಾಶಾಸನವನ್ನು ನೀಡಲಾಗುತ್ತಿದೆ ಎಂದು ತಾಲೂಕು ಯೋಜನಾಧಿಕಾರಿ ವೈ.ಪ್ರಕಾಶ್ ತಿಳಿಸಿದರು.

ಈ ಸಂದರ್ಭ ಸೋಮವಾರಪೇಟೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಹಾಗೂ ಸೇವಾಪ್ರತಿನಿಧಿ ತಾರಾಮಣಿ ಉಪಸ್ಥಿತರಿದ್ದರು.