ಸೋಮವಾರಪೇಟೆ, ಜು. 13: ಅಖಿಲ ಭಾರತ ಕುರುಹಿನಶೆಟ್ಟಿ (ನೇಕಾರ) ವಿದ್ಯಾರ್ಥಿನಿ ನಿಲಯ ಚಾರಿಟೇಬಲ್ ಟ್ರಸ್ಟ್ ಇವರ ವತಿಯಿಂದÀ ಜನಾಂಗದ ಬಡ ವಿದ್ಯಾರ್ಥಿನಿಯರಿಗೆ ವಸತಿ ನಿಲಯ ಹಾಗೂ ಪಿ.ಜಿ. ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಆರ್ಥಿಕವಾಗಿ ಹಿಂದುಳಿದ ನೇಕಾರ ಕುರುಹಿನಶೆಟ್ಟಿ ವಿದ್ಯಾರ್ಥಿನಿಯರ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಟ್ರಸ್ಟ್ ಮೂಲಕ ಸಹಕಾರ ನೀಡುತ್ತಿದ್ದು, ಹೊರ ಊರಿಗೆ ವಿದ್ಯಾರ್ಥಿನಿಯರು ತೆರಳಿದ್ದಲ್ಲಿ ಅಂತಹವರಿಗೆ ಸ್ಥಳೀಯ ಕಾಲೇಜಿನ ವಸತಿ ನಿಲಯ ಅಥವಾ ಪಿ.ಜಿ.ಯಲ್ಲಿದ್ದು ಓದುವವರಿಗೆ ಊಟ ಮತ್ತು ವಸತಿಯ ಖರ್ಚನ್ನು (ಟ್ರಸ್ಟಿನ ನಿಯಮಗಳಿಗೆ ಅನುಗುಣವಾಗಿ) ಶೈಕ್ಷಣಿಕ ವರ್ಷ ಪ್ರಾರಂಭದಿಂದ ಅಂತ್ಯದವರೆಗೂ ನೀಡಲಾಗುತ್ತದೆ.

ಜನಾಂಗದ ವಿದ್ಯಾರ್ಥಿನಿಯರು ಹೆಚ್ಚಿನ ಮಾಹಿತಿ ಹಾಗೂ ಅರ್ಜಿಗಳನ್ನು ಪಡೆದುಕೊಳ್ಳಲು ಅಖಿಲ ಭಾರತ ಕುರುಹಿನಶೆಟ್ಟಿ (ನೇಕಾರ) ವಿದ್ಯಾರ್ಥಿನಿ ನಿಲಯ ಚಾರಿಟೇಬಲ್ ಟ್ರಸ್ಟ್, ನಂ. 13, `ಅಕ್ಷಯ', 3ನೇ ಮುಖ್ಯ ರಸ್ತೆ, 3ನೇ ಅಡ್ಡ ರಸ್ತೆ, ಶ್ರೀನಿಧಿ ಬಡಾವಣೆ, ಜೆ.ಪಿ. ನಗರ 8ನೇ ಹಂತ, ಬೆಂಗಳೂರು-560062, ಮೊ. 9480353269, 9342888755 ಸಂಪರ್ಕಿಸಬಹುದಾಗಿದೆ.