ಕುಶಾಲನಗರ, ಜು. 8: ನೂತನ ಕಾವೇರಿ ತಾಲೂಕು ರಚನೆಗೊಂಡ ಹಿನೆÀ್ನಲೆಯಲ್ಲಿ ತಾಲೂಕಿನ ವಿವಿಧ ಕಚೇರಿಗಳಿಗೆ ಸಂಬಂಧಪಟ್ಟ ಸೂಕ್ತ ಸ್ಥಳಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸುವ ಸಂಬಂಧ ತಾಲೂಕು ಹೋರಾಟ ರಚನಾ ಸಮಿತಿ ಪ್ರಮುಖರು ಕುಶಾಲನಗರದಲ್ಲಿ ಸಭೆ ನಡೆಸಿದರು.
ಕಾವೇರಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಗತ್ಯವಿರುವ ತಾಲೂಕು ಪಂಚಾಯ್ತಿ ಕಚೆÉೀರಿ ಹಾಗೂ ತಾಲೂಕು ಕಚೆÉೀರಿ ಸೇರಿದಂತೆ ವಿವಿಧ ಕಚೇರಿಗಳಿಗೆ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸೂಕ್ತ ಸ್ಥಳಾವಕಾಶದ ಬಗ್ಗೆ ಚರ್ಚಿಸಲಾಯಿತು.
ಗುಂಡುರಾವ್ ಬಡಾವಣೆಯ ಖಾಲಿ ಜಾಗ, ಹಾರಂಗಿ ರಸ್ತೆಯ ಒತ್ತಿನಲ್ಲಿರುವ ಖಾಸಗಿ ಜಾಗ ಸೇರಿದಂತೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ ಸರಕಾರಿ ಜಾಗಗಳನ್ನು ನೂತನ ಕಚೇರಿಗಳ ಕಟ್ಟಡ ನಿರ್ಮಾಣಕ್ಕೆ ಬಳಸುವಂತೆ ಅಧಿಕಾರಿಗಳ ಗಮನಕ್ಕೆ ತರುವದು, ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆ ನಿರ್ಧರಿಸಿತು.
ಉಪವಿಭಾಗಾಧಿಕಾರಿ ಮತ್ತು ತಾಲೂಕು ತಹಶೀಲ್ದಾರ್ ಸಮಕ್ಷಮದಲ್ಲಿ ಕುಶಾಲನಗರದಲ್ಲಿ ತಾ. 9ರಂದು ಸಭೆ ನಡೆಯಲಿದ್ದು, ಈ ಸಂದರ್ಭ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಒದಗಿಸಲು ಸಭೆ ನಿರ್ಣಯ ಕೈಗೊಂಡಿತು.
ಸಭೆಯಲ್ಲಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಕೆ.ನಾಗೇಂದ್ರ, ಪ್ರಮುಖರಾದ ಎಸ್.ಎನ್.ನರಸಿಂಹಮೂರ್ತಿ, ಕೆ.ಪಿ.ಚಂದ್ರಕಲಾ, ಮಂಜುನಾಥ್ ಗುಂಡುರಾವ್, ಎಂ.ವಿ.ನಾರಾಯಣ, ವಿ.ಡಿ.ಪುಂಡರೀಕಾಕ್ಷ, ಅಬ್ದುಲ್ ಖಾದರ್, ಪಪಂ ಸದಸ್ಯರುಗಳಾದ ಅಮೃತ್‍ರಾಜ್, ದಿನೇಶ್, ಜಯವರ್ಧನ್, ಆನಂದ್, ಸುರೇಶ್ ಹಾಗೂ ಎಂ.ಎಂ.ಚರಣ್, ಎಂ.ಡಿ.ಕೃಷ್ಣಪ್ಪ, ಉಮಾಶಂಕರ್ ಮತ್ತಿತರರು ಇದ್ದರು.