ವೀರಾಜಪೇಟೆ, ಜು. 8: ಇಸ್ಲಾಮಿಕ್ ಸರ್ವಿಸ್ ಟ್ರಸ್ಟ್ ಆಶ್ರಯದಲ್ಲಿ ಇಲ್ಲಿನ ಕಲ್ಲುಬಾಣೆಯಲ್ಲಿ “ಹೆವೆನ್ಸ್” ಹೆಸರಿನ ಕುರ್‍ಆನಿಕ್ ಪ್ರೀ-ಸ್ಕೂಲಿನ ಉದ್ಘಾಟನೆಯನ್ನು ಟ್ರಸ್ಟ್ ಅಧ್ಯಕ್ಷ ಕೆ.ಪಿ. ಕುಂಞÂ ಮುಹಮ್ಮದ್ ನೆರವೇರಿಸಿದರು. ಕರ್ನಾಟಕ ವಕ್ಫ್ ಸಲಹಾ ಸಮಿತಿ ಸದಸ್ಯ ಅತಿಫ್ ಮನ್ನಾ, ಬ್ರೈಟ್ ಪಬ್ಲಿಕ್ ಶಾಲೆಯ ಝಕರಿಯಾ ನದ್ವಿ ಮಾತನಾಡಿದರು. ಪ್ರಾಂಶುಪಾಲೆ ಎನ್.ಎನ್. ಫಾತಿಮಾ, ಕಾಫಿ ಬೆಳೆಗಾರ ಇ.ವಿ. ಮೊಯ್ದಿನ್ ಕುಟ್ಟಿ ವೇದಿಕೆಯಲ್ಲಿದ್ದರು. ಟ್ರಸ್ಟ್ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರೆಹೆಮಾನ್ ಅಧ್ಯಕ್ಷತೆ ವಹಿಸಿದ್ದರು. ಬ್ರೈಟ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಕೆ.ಟಿ. ಬಶೀರ್ ಸ್ವಾಗತಿಸಿ, ಎಂ.ಎ. ಶುಕೂರ್ ವಂದಿಸಿದರು.