ಸುಂಟಿಕೊಪ್ಪ, ಜು. 8: ಉಪ್ಪುತ್ತೋಡು ಗ್ರಾಮದ ಮಹಿಳೆಯೊಬ್ಬರ ಮಾನಭಂಗಕ್ಕೆ ಯತ್ನಿಸಿದ ಯುವಕನನ್ನು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಸುಂಟಿಕೊಪ್ಪ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತೊಂಡೂರುವಿನ ನಿವಾಸಿ ಉಮ್ಮರ್ ಎಂಬವರ ಪುತ್ರ ಕಬೀರ್ (28) ಎಂಬಾತ ಮಹಿಳೆಯೊಬ್ಬರು ಭಾನುವಾರ ಕೆಲಸದ ನಿಮಿತ್ತ ರಸ್ತೆಯಲ್ಲಿ ನಡೆದುಕೊಂಡು ತೆರಳುತ್ತಿದ್ದ ಸಂದರ್ಭ ಎಳೆದು ಮಾನಭಂಗಕ್ಕೆ ಯತ್ನಿಸಿದ್ದ ಬಗ್ಗೆ ಮಹಿಳೆಯು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮೊಕದ್ದಮೆ ದಾಖಲಿಸಿಕೊಂಡು ಕ್ಷಿಪ್ರ ಕಾರ್ಯಾಚರಣೆಗೆ ಇಳಿದ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಸೋಮವಾರ ಸಂಜೆ ವೇಳೆ ತೊಂಡೂರುವಿನಲ್ಲಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡರು. ಆರೋಪಿಯ ವಿರುದ್ಧ ಐಪಿಸಿ 354 ಅಡಿಯಲ್ಲಿ ಕ್ರಮಕೈಗೊಳ್ಳಲಾಗಿದೆ
ಆರೋಪಿಯು ಇದೇ ರೀತಿಯಲ್ಲಿ 7ನೇ ಹೊಸಕೋಟೆಯ ಮಹಿಳೆಯೊರ್ವರ ಮೇಲೆ ಮಾನಭಂಗಕ್ಕೆ ಯತ್ನಿಸಿ 6 ತಿಂಗಳ ಸಜೆಯನ್ನು ಅನುಭವಿಸಿ ಬಿಡುಗಡೆಗೊಂಡಿದ್ದು, ಮತ್ತೆ ಅದೇ ಚಾಳಿಯಲ್ಲಿ ತೊಡಗಿಸಿಕೊಂಡಿರುವದು ಗ್ರಾಮದ ಮಹಿಳೆಯರಲ್ಲಿ ಆತಂಕ ಉಂಟುಮಾಡಿದೆ.