ಕುಶಾಲನಗರ, ಜು. 8: ಬೈಲುಕೊಪ್ಪೆ ಟಿಬೇಟಿಯನ್ ಶಿಬಿರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರೊಂದು (ಕೆಎ.41.ಬಿ.1060) ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು ಇನ್ನಿಬ್ಬರಿಗೆ ತೀವ್ರ ಗಾಯಗಳುಂಟಾದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಬೈಲುಕೊಪ್ಪೆ ನಿವಾಸಿ ಕಾರು ಚಾಲಕ ಸುನಿಲ್ (28) ಮತ್ತು 4ನೇ ಕ್ಯಾಂಪಿನ ಬೌದ್ಧ ಸನ್ಯಾಸಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಟಿಬೇಟಿಯನ್ ಸನ್ಯಾಸಿಗಳಿಗೆ ತೀವ್ರ ಗಾಯಗಳುಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂಜಾನೆ ಬೈಲುಕೊಪ್ಪೆಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿಯಲ್ಲಿ ಕರೆದೊಯ್ಯುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಲಾರಿಗೆ ಡಿಕ್ಕಿಯಾದ ಹಿನೆÀ್ನಲೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತ ಸುನಿಲ್ ಬೈಲುಕೊಪ್ಪೆ ನಿವಾಸಿಯಾಗಿದ್ದು ಅವಿವಾಹಿತನಾಗಿದ್ದಾನೆ. ಬೆಂಗಳೂರು ಪೊಲೀಸರು ಕ್ರಮಕೈಗೊಂಡಿದ್ದಾರೆ.