ಶ್ರೀಮಂಗಲ, ಜು. 8 : ಶ್ರೀಮಂಗಲ ಸಮೀಪ ಇರ್ಪು ಜಂಕ್ಷನ್‍ನಲ್ಲಿ ಭಾನುವಾರ ಸಂಜೆ ನಡೆದ ಅಪಘಾತದಲ್ಲಿ ಯುವಕ ನೊರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊರ್ವ ಯುವಕ ಗಂಭೀರ ಗಾಯಗೊಂಡಿದ್ದಾನೆ.

ಟಿ.ಶೆಟ್ಟಿಗೇರಿಯ ತಾವಳಗೇರಿ ನಿವಾಸಿ ಮಚ್ಚಮಾಡ ಉತ್ತಯ್ಯನವರ ಪುತ್ರ ದೇವಯ್ಯ (ಡ್ಯಾನಿ) (19) ಮೃತಪಟ್ಟ ಯುವಕ. ಇರ್ಪು ರಸ್ತೆಯಲ್ಲಿ ಬರುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ತಲೆಗೆ ತೀವ್ರ ಗಾಯವಾದ ಹಿನೆÀ್ನಲೆ ಸ್ಥಳದಲ್ಲೇ ದೇವಯ್ಯ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ದೇವಯ್ಯ ಅವರ ಗೆಳೆಯ ಟಿ.ಶೆಟ್ಟಿಗೇರಿ ಸಮೀಪ ನೆಮ್ಮಲೆ ಗ್ರಾಮದ ಚೊಟ್ಟೆಯಾಂಡಮಾಡ ರಮೇಶ್ ಚಿಣ್ಣಪ್ಪ ಅವರ ಪುತ್ರ ನಾಚಪ್ಪನಿಗೆ (19) ಗಂಭೀರ ಗಾಯವಾಗಿದ್ದು, ಆತನನ್ನು ಪ್ರಥಮ ಚಿಕಿತ್ಸೆ ನೀಡಿ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸೇರಿಸಲಾಗಿದ್ದು, ಸೋಮವಾರ ಸಂಜೆ ದೊರೆತ ಮಾಹಿತಿಯಂತೆ ಜೀವಪಾಯದಿಂದ ಪಾರಾಗಿದ್ದಾರೆ.

ಮೃತಪಟ್ಟ ದೇವಯ್ಯ ತನ್ನ ಪಲ್ಸರ್ ಬೈಕ್‍ನ್ನು ಚಾಲಿಸುತ್ತಿದ್ದನು. ಇರ್ಪುವಿಗೆ ತೆರಳಿ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಅಪಘಾತ ಸಂದರ್ಭ ಇಬ್ಬರು ಸವಾರರು ರಸ್ತೆ ಬದಿಗೆ ಎಸೆಯಲ್ಪಟ್ಟಿದ್ದು, ಅಪಘಾತವಾದ ಸುಮಾರು ಸಮಯದ ನಂತರವಷ್ಟೇ ಇತರ ವಾಹನ ಸವಾರರ ಗಮನಕ್ಕೆ ಬಂದು ಪರಿಶೀಲಿಸಿದ ವೇಳೆ ದೇವಯ್ಯ ಮೃತಪಟ್ಟಿರುವದು ಹಾಗೂ ನಾಚಪ್ಪ ಗಂಭೀರ ಗಂಭೀರ ಸ್ಥಿತಿಯಲ್ಲಿರುವದನ್ನು ಕಂಡು ಸ್ಥಳೀಯರು ಗಾಯಾಳುವನ್ನು ಪ್ರಥಮ ಚಿಕಿತ್ಸೆಗೆ ಕರೆತಂದರು.

ಮೃತ ದೇವಯ್ಯ ಟಿ. ಶೆಟ್ಟಿಗೇರಿಯಲ್ಲಿ ನೆಲೆಸಿದ್ದರು. ಗಾಯಾಳು ನಾಚಪ್ಪ ವೀರಾಜಪೇಟೆಯ ಸೆಂಟ್ ಆನ್ಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾನೆÉ. ಮಚ್ಚಮಾಡ ಉತ್ತಯ್ಯ ಅವರಿಗೆ ದೇವಯ್ಯ ಏಕ ಮಾತ್ರ ಪುತ್ರನಾಗಿದ್ದು, ಸೋಮವಾರ ಸಂಜೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ಏಕೈಕ ಪುತ್ರನನ್ನು ಕಳೆದುಕೊಂಡ ಪೆÇೀಷಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.