ಮಡಿಕೇರಿ, ಜು. 7: ಭಾರತ ಸರಕಾರ ನೆಹರು ಯುವ ಕೇಂದ್ರ ಸಹಯೋಗದಿಂದ ಸ್ವಚ್ಛ ಭಾರತ ಬೇಸಿಗೆ ಶಿಬಿರ ಪ್ರಾರಂಭ ಮಾಡಲಾಗಿದೆ. ಗ್ರಾಮೀಣ ಭಾಗದ ಯುವ-ಯುವತಿ-ಮಹಿಳಾ ಮಂಡಳಿಗಳು ಈ ಒಂದು ಸ್ವಚ್ಛ ಭಾರತ ಬೇಸಿಗೆ ಶಿಬಿರದಲ್ಲಿ 50 ಗಂಟೆ ಯುವ ಸಂಘಗಳ ಮುಖಾಂತರ ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ ಕುರಿತು ಜಾಗೃತಿ ಹಾಗೂ ನಿರ್ವಹಣೆ ಕಾರ್ಯ ನಿರ್ವಹಿಸುವದು, ಪ್ಲಾಸ್ಟಿಕ್ ನಿಷೇಧ ಕುರಿತು ಜಾಗೃತಿ ಮೂಡಿಸುವದು, ಪ್ರತಿಮೆಗಳನ್ನು ಸ್ವಚ್ಛಗೊಳಿಸುವದು, ಸರಕಾರಿ ಶಾಲೆ, ಸಾರ್ವಜನಿಕ ಆಸ್ಪತ್ರೆ, ಉದ್ಯಾನವನಗಳು ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಮಾಡುವ ಮೂಲಕ ಫೋಟೋ ಪ್ರತಿ ಹಾಗೂ ಕಾರ್ಯಕ್ರಮ ವರದಿಗಳನ್ನು ಕಾರ್ಯಕ್ರಮ ಮುಗಿದ ದಿನವೇ ಫೋಟೋಗಳನ್ನು ವ್ಯಾಟ್ಸಪ್ 9901312526 ಮೂಲಕ ಕಳುಹಿಸಲು ಕೋರಲಾಗಿದೆ. ವ್ಯಾಟ್ಸಪ್ ಕಳಿಸಿದ ನಂತರ ಆಮಂತ್ರಣ ಪತ್ರಿಕೆ, ವರದಿ ಫೋಟೋ, ಭಾಗವಹಿಸಿದವರ ಪಟ್ಟಿಗಳೊಂದಿಗೆ ಫೈಲ್ ತಯಾರಿ ಮಾಡಿ ಕಚೇರಿಗೆ ತಲಪಿಸಲು ಈ ಮೂಲಕ ಕೋರಲಾಗಿದೆ. ಅತ್ಯುತ್ತಮವಾಗಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ಯುವಕ-ಯುವತಿ ಮಂಡಳಿಗಳಿಗೆ ಪ್ರಥಮ ರೂ. 30,000, ದ್ವಿತೀಯ ರೂ. 20,000, ತೃತೀಯ ರೂ. 10,000 ನಗದು ಮತ್ತು ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವದು ಎಂದು ಪ್ರಕಟಣೆ ತಿಳಿಸಿದೆ.