ಮಡಿಕೇರಿ, ಜು. 7: 2019-20ನೇ ಸಾಲಿನ ಜಿಲ್ಲಾ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಿಲಿಟಿ (ಎ.ಪಿ.ಡಿ.) ಸಂಸ್ಥೆ ಮತ್ತು ಪಟ್ಟಣ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಉದ್ಯೋಗ ಮತ್ತು ತರಬೇತಿಗೆ ಆಯ್ಕೆ ಮಾಡುವ ಉದ್ದೇಶದಿಂದ ವೀರಾಜಪೇಟೆ ತಾಲೂಕು ಮತ್ತು ಹೋಬಳಿ ಮಟ್ಟದ ವಾಕ್‍ದೋಷ, ಶ್ರವಣ ದೋಷವುಳ್ಳ ಮತ್ತು ದೈಹಿಕ ವಿಶೇಷಚೇತನರ ಶಿಬಿರವನ್ನು ತಾ. 10 ರಂದು ವೀರಾಜಪೇಟೆಯ ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ನಡೆಸಲಾಗುತ್ತದೆ.