ಮಡಿಕೇರಿ, ಜು. 7: ಮಡಿಕೇರಿ ನಗರಸಭೆಯಲ್ಲಿ ಈ ಬಾರಿಯ ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ಶೇಕಡಾ 300ರಷ್ಟ್ಟು ಏರಿಕೆಯಾಗಿದ್ದು, ಸರ್ಕಾರದೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸುವದಾಗಿ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಭರವಸೆ ನೀಡಿದರು.ನಗರಸಭಾ ಆಯುಕ್ತ ರಮೇಶ್ ಅವರ ಸಮ್ಮುಖದಲ್ಲಿ; ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮಾಜೀ ಅಧ್ಯಕ್ಷ ಜಿ. ಚಿದ್ವಿಲಾಸ್, ನಗರ ಅಧ್ಯಕ್ಷ ಬಿ.ಕೆ. ಅರುಣ್ ಕುಮಾರ್ ಇವರುಗಳು ಶಾಸಕರಿಗೆ ತೆರಿಗೆ ವಿಚಾರದಲ್ಲಿ ಉಂಟಾದ
(ಮೊದಲ ಪುಟದಿಂದ) ಗೊಂದಲದ ಬಗ್ಗೆ ದಾಖಲಾತಿ ಸಹಿತ ಮನವರಿಕೆ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತ ರಮೇಶ್ ಹಾಗೂ ಇಂಜಿನಿಯರ್ ವನಿತ ಇವರುಗಳು, ಇದೀಗ ಕಂಪ್ಯೂಟರ್ ಆಧಾರಿತ ಬಿಲ್‍ಗಳು ಬರುತ್ತಿದ್ದು, ದರಗಳ ನಮೂದನ್ನು ಬೆಂಗಳೂರಿನಲ್ಲೇ ಮಾಡಲಾಗಿರು ವದರಿಂದ ಬದಲಾವಣೆಗಳನ್ನು ಅಲ್ಲಿಯೇ ಮಾಡಬೇಕಿದೆ ಎಂದರು.ಈ ಬಗ್ಗೆ ಪ್ರತಿಕ್ರಿಯಿಸಿದ ಸುನಿಲ್ ಸುಬ್ರಮಣಿ ಅವರು, ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಮಾರ್ಗೋ ಪಾಯ ಕಂಡುಹಿಡಿಯುವ ದಾಗಿ ತಿಳಿಸಿದರು. ನಗರಸಭೆ ಮಾಜೀ ಅಧ್ಯಕ್ಷ ಪಿ.ಡಿ. ಪೊನ್ನಪ್ಪ ಹಾಗೂ ಮಾಜೀ ಉಪಾಧ್ಯಕ್ಷ್ಷ ಟಿ.ಎಸ್. ಪ್ರಕಾಸ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.