ವೀರಾಜಪೇಟೆ, ಜು. 7: ಉತ್ತಮ ಶಿಕ್ಷಣದಿಂದ ಸವಾಲುಗಳನ್ನು ಎದುರಿ ಸಲು ಸಾಧ್ಯ, ಅಭಿವೃದ್ಧಿ ಎಂಬದು ಯಾವದೇ ಒಂದು ಸಮುದಾಯದ ಅಭಿವೃದ್ಧಿಯಲ್ಲ, ಸಮಾಜದ ಎಲ್ಲರ ಅಭಿವೃದ್ಧಿ ಎಂದು ಮೈಸೂರು ರಾಜಮ&divound; Éತನದ 27ನೇ ಮಹಾರಾಜ ಯದುವೀರ್ ಕೃಷ್ಣರಾಜ ಒಡೆಯರ್ ತಿಳಿಸಿದರು
ವೀರಾಜಪೇಟೆಯ ಕಾವೇರಿ ಕಲ್ಯಾಣ ಮಂಟಪ ಸಭಾಂಗÀಣದಲ್ಲಿ ಇಂದು ಕೊಡವ ಮುಸ್ಲಿಂ ಅಸೋಸಿ ಯೇಷನ್‍ನ 40ನೇ ವರ್ಷಾಚರಣೆ ಹಾಗೂ ಶಿಕ್ಷಣ ನಿಧಿಯ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಯದುವೀರ್ ಅವರು ಕರ್ನಾಟಕದ ವಿಶೇಷವಾಗಿ ಹಿಂದಿನ ಮೈಸೂರಿನ ರಾಜಮನೆತನದವರ ಆಡಳಿತದಲ್ಲಿ ಮೈಸೂರಿನ ಅಭಿವೃದ್ಧಿಯಲ್ಲಿ ಮುಸ್ಲಿಂ ಜನಾಂಗದ ಕೊಡುಗೆ ಬಹಳಷ್ಟಿದೆ. ಸಂಘ ಸಂಸ್ಥೆಗಳು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಪರಿಸರ ಸಂರಕ್ಷಣೆ ಎಂಬದು ಒಂದು ಧಾರ್ಮಿಕ ಕರ್ತವ್ಯ ವೆಂಬ ಪ್ರಜ್ಞೆ ಪ್ರತಿಯೊಬ್ಬರಲ್ಲಿ ಬೆಳೆಯ ಬೇಕು. ನಮ್ಮ ಎಲ್ಲ್ಲಾ ಕೆಲಸ ಗಳನ್ನೂ ದೇವರು ನೋಡುತ್ತಿದ್ದಾನೆ ಎಂಬ ಜಾಗೃತಿ ಪ್ರತಿಯೊಬ್ಬರಲ್ಲಿ ಇರಬೇಕಾಗಿದೆ ಎಂದರು.(ಮೊದಲ ಪುಟದಿಂದ) ವಿಧಾನ ಪರಿಷತ್‍ನ ಸದಸ್ಯ ಬಿ.ಎಂ. ಫಾರೂಖ್ ‘ದಫ್’ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಕೊಡಗಿನ ಮುಸ್ಲಿಂ ಸಮುದಾಯವು ಉತ್ತಮ ಶಿಕ್ಷಣ ಪಡೆಯುವದರೊಂದಿಗೆ ಸಾಮರಸ್ಯದ ಬದುಕಿಗೆ ಹೆಚ್ಚು ಒತ್ತು ನೀಡಬೇಕು. ಲೌಕಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣಕ್ಕೂ ಆದ್ಯತೆ ಕಲ್ಪಿಸಬೇಕು. ಅತಿ ನೂತನ ತಂತ್ರಜ್ಞಾನ ಬಳಸುವ ಮೂಲಕ ಸಮುದಾಯ ಮುಖ್ಯ ವಾಹಿನಿಯ ಭಾಗವಾಗಬೇಕು ಎಂದು ಹೇಳಿದರು.
ಅತಿಥಿಯಾಗಿದ್ದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಅನೇಕತೆಯಲ್ಲಿ ಏಕತೆಯನ್ನು ಕಾಣುವ ವಿಶಿಷ್ಟತೆಯನ್ನು ನಮ್ಮ ದೇಶ ಹೊಂದಿದೆ. ಆದ್ದರಿಂದಲೇ ದೇಶವು ಅಭಿವೃದ್ದಿಯಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಅಲ್ಪಸಂಖ್ಯಾತರು ಉತ್ತಮ ಚಿಂತನೆ ಮತ್ತು ದೃಷ್ಟಿಕೋನಗಳಿಂದ ಮುಖ್ಯವಾಹಿನಿಗೆ ಬರುವಂತಾಗಲಿ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ, ರಾಜ್ಯ ಸರಕಾರದ ವಿಶೇಷ ದೆಹಲಿ ಪ್ರತಿನಿಧಿ ಸಯ್ಯದ್ ಮೊಹ್ಸಿನ್ ಅಲ್ತಾಫ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಡವ ಮುಸ್ಲಿಮ್ ಅಸೋಸಿ ಯೇಷನ್ ಅಧ್ಯಕ್ಷ ದುದ್ದಿಯಂಡ ಸೂಫಿ ಹಾಜಿ ಮಾತನಾಡಿ ಸಂಸ್ಥೆಯು ಕಳೆದ 40 ವರ್ಷಗಳು ನಡೆದು ಬಂದ ದಾರಿಯ ಬಗ್ಗೆ ಬೆಳಕು ಚೆಲ್ಲಿದರು. ಕೊಡವ ಮುಸ್ಲಿಮರ ಕುರಿತ ಅಧ್ಯಯನ ಪೀಠದ ಅಗತ್ಯತೆ ಮತ್ತು ಜಿಲ್ಲೆಯ ಅಭಿವೃದ್ಧಿಯನ್ನು ಮುಂದಿರಿಸಿ ಸಂಸ್ಥೆಯ ಪರವಾಗಿ ಶಾಸಕರ ಮೂಲಕ ಸರಕಾರಕ್ಕೆ ಮನವಿ ಪತ್ರವೊಂದನ್ನು ಸಲ್ಲಿಸಿದರು. ಸಂಸ್ಥೆಯ ಉಪಾಧ್ಯಕ್ಷ ಡಾ. ಜೆ.ಎ. ಕುಂಞಬ್ದುಲ್ಲಾ ಸ್ವಾಗತಿಸಿದರು. ಕಾರ್ಯದರ್ಶಿ ಎಂ.ಎಂ. ಇಸ್ಮಾಯಿಲ್ ವರದಿ ಮಂಡಿಸಿದರು. ಇ.ಎಂ.ರಫೀಖ್ ನಿರೂಪಿಸಿದರು.
ಜನಾಂಗದ ಪ್ರಥಮ ಮಹಿಳಾ ಪಿ.ಹೆಚ್.ಡಿ. ಪದವೀಧÀರೆ ಈಗ ಮಂಡ್ಯದ ವಿ.ಸಿ. ಫಾರಮ್‍ನ ಕೃಷಿ ಮಹಾ ವಿದ್ಯಾಲಯದ ಬೇಸಾಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಟಿ.ಎಸ್. ಫಾತಿಮಾ, ಖಜಾನಾಧಿಕಾರಿಗಳಾಗಿ ನಿವೃತ್ತಿ ಹೊಂದಿದ ದುದ್ದಿಯಂಡ ಎಂ. ಉಸ್ಮಾನ್ ಹಾಜಿ ಮತ್ತು ಕನ್ನಡಿಯಂಡ ಎ.ಆಲಿ ಹಾಜಿ ಇವರನ್ನು ಈ ಸಂದರ್ಭದಲ್ಲಿ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಿದ 35 ಮಂದಿ ಪ್ರತಿಭಾನ್ವಿತರಿಗೆ ಪ್ರಶಸ್ತಿ ಪತ್ರ ಮತ್ತು ಪಾರಿತೋಷಕಗಳನ್ನು ವಿತರಿಸ ಲಾಯಿತು.