ಮಡಿಕೇರಿ, ಜು. 7: ಪ್ರಸಕ್ತ (2019-20) ಸಾಲಿನ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಲಲಿತಕಲಾ ಅಕಾಡೆಮಿಯು ನಡೆಸುವ ಕಾರ್ಯಕ್ರಮಗಳಿಗೆ ಆಯ್ಕೆ ಮಾಡಲು ಆಸಕ್ತ ಚಿತ್ರಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ತಾ. 31 ರೊಳಗೆ ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು-560002, ಇವರ ವಿಳಾಸಕ್ಕೆ ಸಲ್ಲಿಸಲು ಕೋರಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗೆ ಅಕಾಡೆಮಿಯ ವೆಬ್‍ಸೈಟ್ ತಿತಿತಿ. ಟಚಿಟiಣಞಚಿಟಚಿಞಚಿಡಿಟಿಚಿಣಚಿಞಚಿ.oಡಿg, ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಡಾ. ಎ.ಸಿ. ಶೈಲಜಾ ತಿಳಿಸಿದ್ದಾರೆ.