ಚೆಟ್ಟಳ್ಳಿ: ವಿದ್ಯಾರ್ಥಿಗಳು ಉತ್ತಮ ಅಂಕಗಳಿಸುವರ ಜೊತೆಗೆ ಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಚೆಟ್ಟಳ್ಳಿ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕಿ ಹಿಲ್ಮಿತಾ ಕರೆ ನೀಡಿದರು. ಚೆಟ್ಟಳ್ಳಿ ಪ್ರೌಢಶಾಲಾ ಶಿಕ್ಷಕರಿಗೆ ಶಾಲಾ ಆಡಳಿತ ಮಂಡಳಿ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಆಗಮಿಸಿ ಮಾತನಾಡಿದರು. ಶಾಲಾ ಆಡಳಿತ ಮಂಡಳಿ ಸಂಚಾಲಕ ಮುಳ್ಳಂಡ ರತ್ತು ಚಂಗಪ್ಪ ಮಾತನಾಡಿ, ಚೆಟ್ಟಳ್ಳಿ ಪ್ರೌಢಶಾಲೆಯು 56 ವರ್ಷ ಕಳೆದಿದ್ದು, ಶಾಲಾ ಜಾಗ ದಾನಿ ಮುಳ್ಳಂಡ ಹಾಗೂ ಬಟ್ಟೀರ ಕುಟುಂಬಸ್ಥರ ಸೇವೆಯನ್ನು ಸ್ಮರಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪಿ.ಪಿ. ಜಯಾನಂದ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲೇ ಶಿಸ್ತನ್ನು ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ದಿಲೀಪ್ ಅಪ್ಪಚ್ಚು, ದಂಬೆಕೋಡಿ ಹರೀಶ್, ಪುತ್ತರೀರ ಕಾಶಿ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಜಿ.ಸಿ. ಸತ್ಯನಾರಾಯಣ ಹಾಗೂ ಶಿಕ್ಷಕ ವೃಂದ ಇದ್ದರು.ಗೋಣಿಕೊಪ್ಪ: ಗೋಣಿಕೊಪ್ಪಲುವಿನ ಕ್ಯಾಲ್ಸ್ ಶಾಲೆಯಲ್ಲಿ ವಿದ್ಯಾರ್ಥಿಗಳ ನಾಯಕತ್ವ ಸಮಾರಂಭ ಜರುಗಿತು. ಈ ಸಂದರ್ಭ ಮುಖ್ಯ ಅತಿಥಿಯಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ಮಾತನಾಡಿ, ನಾಯಕತ್ವ ಎನ್ನುವದು ಹುಟ್ಟಿನಿಂದ ಬರುವಂತದ್ದಲ್ಲ. ಅದು ಪ್ರತಿಯೊಬ್ಬರು ಬೆಳೆಸಿಕೊಳ್ಳಬಹುದಾದ ಗುಣ ಎಂದರು.

ಸಮಯ, ಸಂದರ್ಭ ಬಂದಾಗ ಯಾರು ಬೇಕಾದರೂ ನಾಯಕರಾಗಬಹುದು. ಪರಿಸ್ಥಿತಿ ಹದಗೆಟ್ಟಾಗ ಸಮಯಕ್ಕೆ ಒದಗುವ ಸೌಲಭ್ಯಗಳನ್ನೇ ಬಳಸಿಕೊಂಡು ಪರಿಸ್ಥಿತಿಯನ್ನು ನಿಭಾಯಿಸಬೇಕು. ಪ್ರಜಾಪ್ರಭುತ್ವದಲ್ಲಿ ನಾಯಕತ್ವ ಎನ್ನುವದು ಕೇವಲ ಒಬ್ಬದ ನಿರ್ಧಾರಕ್ಕೆ ಸೀಮಿತವಾಗಿರುವದಿಲ್ಲ ಎಂದರು. ವಿದ್ಯಾರ್ಥಿಗಳು ಮತ ಚಲಾಯಿಸಿ ಆಯ್ಕೆಯಾಗಿರುವ ಶಾಲೆಯ ಮುಖ್ಯ ನಾಯಕ ದುೃವ ಅಯ್ಯಪ್ಪ ಹಾಗೂ ಮುಖ್ಯ ನಾಯಕಿ ಸಿನೋನ್ ಅಕ್ಕಮ್ಮ ಹಾಗೂ ಇತರ ನಾಯಕರುಗಳಿಗೆ ಸಂಸ್ಥೆಯ ಪರವಾಗಿ ಪ್ರತಿಜ್ಞಾವಿಧಿ ಭೋದಿಸಲಾಯಿತು.ಮೇಕೇರಿ: ಮೇಕೇರಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉದ್ಯಮಿ ಮುರಳೀಧರ್ ಮತ್ತು ಸುಶೀಲ ಮಧು ಅವರು ನೋಟ್ ಪುಸ್ತಕಗಳನ್ನು ನೀಡಿದರು.ಗುಡ್ಡೆಹೊಸೂರು: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಇತ್ತೀಚಿನ ವರ್ಷದ ಹಳೆ ವಿದ್ಯಾರ್ಥಿಗಳು “ನನ್ನ ಕಿರು ಕಾಣಿಕೆ” ಎಂಬ ಗ್ರೂಪನ್ನು ರಚಿಸಿಕೊಂಡು ತಾವು ವ್ಯಾಸಂಗ ಮಾಡಿದ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಮತ್ತು ಲೇಖನಿಗಳನ್ನು ಉಚಿತವಾಗಿ ವಿತರಿಸಿದರು. ಒಟ್ಟು 30 ಮಂದಿಯ “ನನ್ನ ಕಿರು ಕಾಣಿಕೆ” ಗ್ರೂಪ್‍ನ ಪ್ರಮುಖರಾದ ಜಾನ್ಸನ್, ಚಂದನ್, ಡಯಾನಾ, ಕಿಶನ್, ನಿತೀಶ್, ಮಣಿಕಂಠ, ಪುನೀತ್ ಮುಂತಾದವರು ಹಾಜರಿದ್ದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ.ಎಸ್. ದಿನೇಶ್, ಶಾಲಾ ಮುಖ್ಯ ಶಿಕ್ಷಕ ಸಣ್ಣಸ್ವಾಮಿ ಮತ್ತು ಶಿಕ್ಷಕ ವೃಂದ ಹಾಜರಿದ್ದರು.ನಾಪೆÇೀಕ್ಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬಿ.ಸಿ. ಟ್ರಸ್ಟ್ ವೀರಾಜಪೇಟೆ ವತಿಯಿಂದ ಬೆಟ್ಟಗೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮಾಹಿತಿ ಹಾಗೂ ಸಸಿ ನಾಟಿ ಕಾರ್ಯಕ್ರಮ ಜರುಗಿತು.

ಅಧ್ಯಕ್ಷತೆಯನ್ನು ಬೆಟ್ಟಗೇರಿ ಒಕ್ಕೂಟದ ಅಧ್ಯಕ್ಷೆ ಹೇಮಾ ವಹಿಸಿದ್ದರು. ಪಂಚಾಯಿತಿ ಉಪಾಧ್ಯಕ್ಷೆ ಶಾಂತಿ ಗಿಡಕ್ಕೆ ನೀರು ಎರೆಯುವದರ ಮೂಲಕ ಉದ್ಘಾಟಿಸಿದರು. ಕೃಷಿ ಮೇಲ್ವಿಚಾರಕ ಕೆ. ಚೇತನ್ ಮಾತನಾಡಿ, ಪ್ರಕೃತಿಯೇ ನಮ್ಮ ಉಸಿರು. ಪ್ರತಿಯೊಬ್ಬ ಮನುಷ್ಯನೂ ಪರಿಸರಕ್ಕೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಲು ಸಾಧ್ಯ ಎಂದರು. ಭಾಗಮಂಡಲ ವಲಯ ಮೇಲ್ವಿಚಾರಕ ಸಂತೋಷ್, ಸೇವಾ ಪ್ರತಿನಿಧಿ ಗೌರಮ್ಮ, ಒಕ್ಕೂಟದ ಪದಾಧಿಕಾರಿಗಳು, ನೂರಾರು ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸದಸ್ಯರಿಗೆ ಸಸಿಗಳನ್ನು ವಿತರಿಸಲಾಯಿತು.ಸಿದ್ದಾಪುರ: ನೆಲ್ಲಿಹುದಿಕೇರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಕೆ.ಎಸ್. ಪುಷ್ಪವೇಣಿ ಅವರನ್ನು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದಿಂದ ಬೀಳ್ಕೊಡಲಾಯಿತು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪಿ.ಸಿ. ಅಚ್ಚಯ್ಯ, ಪ್ರಾಂಶುಪಾಲ ಜಸ್ಟಿನ್ ಕೊರಿಯಾ, ಶಿಕ್ಷಕರು, ಸಿಬ್ಬಂದಿಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಇದ್ದರು.