ವೀರಾಜಪೇಟೆ, ಜು. 5: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎ.ಎಸ್.ಐ. ಅವರಿಗೆ ಸಿ.ಕೆ. ಮಾದಪ್ಪ ಅವರಿಗೆ ಇಲಾಖೆಯ ವತಿಯಿಂದ ಬೀಳ್ಕೊಡಲಾಯಿತು.

ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಎ.ಎಸ್.ಐ.ಯಾಗಿ ಸೇವೆ ಸಲ್ಲಿಸುತ್ತಿದ್ದ ಮೂರ್ನಾಡು ನಿವಾಸಿ ಸಿ.ಕೆ. ಮಾದಪ್ಪ ಅವರು ತಮ್ಮ 25 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದರು. ಗ್ರಾಮಾಂತರ ಠಾಣೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಡಿ.ವೈ.ಎಸ್ಪಿ. ನಾಗಪ್ಪ, ಸೇವಾ ಅವಧಿಯಲ್ಲಿ ಸಾರ್ವಜನಿಕ ವಲಯದಲ್ಲಿ ನೀಡಿರುವ ಸೇವೆಯು ಪ್ರಾಮುಖ್ಯತೆ ಪಡೆಯುತ್ತದೆ. ಒತ್ತಡದ ಮಧ್ಯೆ ಕಾರ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳು ಕಚೇರಿಗೆ ಆಗಮಿಸುವ ದುರ್ಬಲರು, ಅಬಲೆ ಮತ್ತು ಶ್ರೀಸಾಮಾನ್ಯರೊಂದಿಗೆ ವ್ಯವಹರಿಸುವ ರೀತಿಯು ತಮ್ಮ ಕರ್ತವ್ಯವನ್ನು ಗುರುತಿಸುವಂತೆ ಮಾಡುತ್ತದೆ ಎಂದರು. ನಿವೃತ್ತರಾದ ಸಿ.ಕೆ. ಮಾದಪ್ಪ ಅವರು ಮಾತನಾಡಿದರು. ವೀರಾಜಪೇಟೆ ವೃತ್ತ ನೀರಿಕ್ಷಕ ಕ್ಯಾತೆಗೌಡ ಮತ್ತು ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ ಅವರುಗಳು ಮಾದಪ್ಪ ಅವರ ಕುರಿತು ಮಾತನಾಡಿದರು. ಇಲಾಖೆಯ ಪ್ರಮುಖರಿಂದ ಸಿ.ಕೆ. ಮಾದಪ್ಪ ಅವರನ್ನು ಸನ್ಮಾನಿಸಲಾಯಿತು. ಗ್ರಾಮಾಂತರ ಠಾಣೆ ಮತ್ತು ನಗರ ಠಾಣೆಯ ಇಲಾಖಾ ಸಿಬ್ಬಂದಿಗಳು ಸಮಾರಂಭದಲ್ಲಿ ಹಾಜರಿದ್ದರು.