ಕೂಡಿಗೆ, ಜು. 4: ಕೂಡಿಗೆ ಹೆಬ್ಬಾಲೆ ಗ್ರಾ.ಪಂ ವ್ಯಾಪ್ತಿಗಳಲ್ಲಿ ಕಳೆದ ಮೂರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕವು ಕಾರ್ಯಗತಗೊಳ್ಳದೇ ಸ್ಥಗಿತಗೊಂಡಿದ್ದವು. ಈ ಬಗ್ಗೆ ‘ಶಕ್ತಿ’ ಬೆಳಕು ಚೆಲ್ಲಿದ್ದವು. ವರದಿಗೆ ಸ್ಪಂದಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ನೀರಿನ ಘಟಕಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕುಡಿಯುವ ನೀರಿನ ಘಟಕದಲ್ಲಿ ದೊಡ್ಡ ಮಟ್ಟದ ತಾಂತ್ರಿಕ ತೊಂದರೆಗಳಿರುವದರಿಂದ ಇನ್ನು ಏಳು ದಿನಗಳ ಒಳಗಾಗಿ ಬದಲಿ ಯಂತ್ರವನ್ನು ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಲಾಗುವದು ಎಂದು ಇಂಜಿನಿಯರ್ ರೇವಣ್ಣ ತಿಳಿಸಿದ್ದಾರೆ. ಈ ಸಂದರ್ಭ ಸಹಾಯಕ ಇಂಜಿನಿಯರ್ ರಮೇಶ್, ಗ್ರಾ.ಪಂ ಕಾರ್ಯದರ್ಶಿ ಶಿಲ್ಪ ಇನ್ನಿತರರು ಇದ್ದರು.