ಸೋಮವಾರಪೇಟೆ, ಜು. 5: ತಾಲೂಕಿನ ಕಿರಗಂದೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾದ ಹೆಚ್.ಎಂ. ರಮೇಶ್ ಅವರನ್ನು ಶಾಲಾಭಿವೃದ್ಧಿ ಸಮಿತಿ ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಬೀಳ್ಕೊಡಲಾಯಿತು.

ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಈ. ಭರತ್ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಕಿರಗಂದೂರು ಪ್ರೌಢಶಾಲೆ ಕಳೆದೆರಡು ಸಾಲಿನಲ್ಲೂ ಹತ್ತನೆ ತರಗತಿಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದಿರುವದು ಹೆಮ್ಮೆಯ ವಿಚಾರವಾಗಿದ್ದು, ನಿವೃತ್ತ ಶಿಕ್ಷಕ ರಮೇಶ್ ಅವರ ಕೊಡುಗೆ ಅಪಾರ ಎಂದರು.

ಸಮಾರಂಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಜಿ.ಜೆ. ಪ್ರಸನ್ನ, ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶೈಲಾ, ಮುಖ್ಯ ಶಿಕ್ಷಕ ಧರ್ಮಪ್ಪ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಂಜುನಾಥ್ ಮತ್ತಿತರರು ಇದ್ದರು.