ಮಡಿಕೇರಿ, ಜು. 5: ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲೂಕಿಗೆ ಸಂಬಂಧಿಸಿದ ಹೋಬಳಿಗಳಲ್ಲಿ 2019ರ ಜುಲೈ ಮಾಹೆಯಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ. ತಾ. 8 ರಂದು ಬೆಳಿಗ್ಗೆ 10.30 ಗಂಟೆಗೆ ಸೋಮವಾರಪೇಟೆ, ಬೆಳಿಗ್ಗೆ 11.30 ಗಂಟೆಗೆ ಶಾಂತಳ್ಳಿ, ಮಧ್ಯಾಹ್ನ 3 ಗಂಟೆಗೆ ಶನಿವಾರಸಂತೆ, ಸಂಜೆ 4 ಗಂಟೆಗೆ ಕೊಡ್ಲಿಪೇಟೆ, ತಾ. 10 ರಂದು ಬೆಳಿಗ್ಗೆ 10.30 ಗಂಟೆಗೆ ಅಮ್ಮತ್ತಿ, ಮಧ್ಯಾಹ್ನ 12.30 ಗಂಟೆಗೆ ವೀರಾಜಪೇಟೆ, ತಾ. 12 ರಂದು ಬೆಳಿಗ್ಗೆ 10.30 ಗಂಟೆಗೆ ಸಂಪಾಜೆ, ಮಧ್ಯಾಹ್ನ 3 ಗಂಟೆಗೆ ಮಡಿಕೇರಿ, ತಾ. 15 ರಂದು ಬೆಳಿಗ್ಗೆ 11 ಗಂಟೆಗೆ ಸುಂಟಿಕೊಪ್ಪ, ಮಧ್ಯಾಹ್ನ 12.30 ಗಂಟೆಗೆ ಕುಶಾಲನಗರ, ತಾ. 17 ರಂದು ಬೆಳಿಗ್ಗೆ 11.30 ಗಂಟೆಗೆ ಬಾಳೆಲೆ, ಮಧ್ಯಾಹ್ನ 12.30 ಗಂಟೆಗೆ ಹುದಿಕೇರಿ, ಮಧ್ಯಾಹ್ನ 2.30 ಗಂಟೆಗೆ ಶ್ರೀಮಂಗಲ, ಮಧ್ಯಾಹ್ನ 3.30 ಗಂಟೆಗೆ ಪೊನ್ನಂಪೇಟೆ, ತಾ. 20 ರಂದು ಬೆಳಿಗ್ಗೆ 11 ಗಂಟೆಗೆ ಭಾಗಮಂಡಲ ಮತ್ತು ಮಧ್ಯಾಹ್ನ 12.30 ಗಂಟೆಗೆ ನಾಪೋಕ್ಲುಗಳಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ.