ಸೋಮವಾರಪೇಟೆ, ಜು. 5: ಇಲ್ಲಿನ ಸರಕಾರಿ ಸಾರ್ವಜನಿಕ ಗ್ರಂಥಾಲಯದಲ್ಲಿ ಕಳೆದ 34 ವರ್ಷಗಳಿಂದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ಬಿ. ಮೂರ್ತಿ ಅವರಿಗೆ ಬೀಳ್ಕೊಡಲಾಯಿತು. ಇವರು ಮಂಡ್ಯ ಜಿಲ್ಲಾ ಕೇಂದ್ರ ಗ್ರಂಥಾಲಯ, ಮದ್ದೂರು ಮತ್ತು ಕಳೆದ 27 ವರ್ಷಗಳಿಂದ ಸೋಮವಾರಪೇಟೆ ಶಾಖಾ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಿದ್ದಾರೆ.