ವೀರಾಜಪೇಟೆ, ಜು. 5: ವೀರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮದ ಬಿ.ಎನ್. ಜಗನ್ನಾಥ ಪೊಲೀಸ್ ಇಲಾಖೆಯಿಂದ ನಿವೃತ್ತರಾಗಿದ್ದಾರೆ. ಇವರು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ.ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಮಡಿಕೇರಿ ಗ್ರಾಮಾಂತರ, ನಗರ ಮತ್ತು ಟ್ರಾಫಿಕ್ ಠಾಣೆ ಹಾಗೂ ಸುಂಟಿಕೊಪ್ಪ, ಸಂಪಾಜೆ, ಚೆಟ್ಟಳ್ಳಿ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.