ಮಡಿಕೇರಿ, ಜು. 4: ಕಡಗದಾಳುವಿನ ಶ್ರೀ ಬೊಟ್ಲಪ್ಪ ಯುವ ಸಂಘದ ವಾರ್ಷಿಕ ಮಹಾಸಭೆ ಸಂಘದ ಕಟ್ಟಡದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಿ.ಕೆ. ಮಂಜು ಅವರು ವಹಿಸಿಕೊಂಡಿದ್ದರು.
ಯುವ ಸಂಘದ ಸ್ಥಾಪನಾ ಅಧ್ಯಕ್ಷರಾದ ಬಿ.ಎಸ್. ಜಯಪ್ಪ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಸಿ.ಕೆ. ಮಂಜು ಪುನರ್ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಪಿ.ಟಿ. ಪೊನ್ನಪ್ಪ, ಮಹಿಳಾ ಉಪಾಧ್ಯಕ್ಷೆಯಾಗಿ ಬಿ.ಜೆ. ವಸಂತಿ, ಕಾರ್ಯದರ್ಶಿಯಾಗಿ ಸಿ.ಎಂ. ನಿಕೇಶ್, ಸಹ ಕಾರ್ಯದರ್ಶಿಯಾಗಿ ಕೆ.ಎಸ್. ಯೋಗೇಶ್, ಖಜಾಂಚಿಯಾಗಿ ಕೆ.ಎನ್. ಅವಿನಾಶ್, ಸಹ ಖಜಾಂಚಿಯಾಗಿ ಕೆ.ಬಿ. ಆದಿತ್ಯ, ಕ್ರೀಡಾ ಕಾರ್ಯದರ್ಶಿಯಾಗಿ ಕೆ.ಟಿ. ಯೋಗೇಶ್, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಬಿ.ಎಂ. ಶಿವಕಾಂತ್, ಸಲಹೆಗಾರರಾಗಿ ಬಿ.ಎಸ್. ಜಯಪ್ಪ ಮತ್ತು ಹೆಚ್.ಎಂ. ಲಕ್ಷ್ಮಣ್ ಅವರನ್ನು ಆಯ್ಕೆ ಮಾಡಲಾಯಿತು.
ಯುವ ಸಂಘದ ಕೊಠಡಿ ಮೇಲ್ವಿಚಾರಕರಾಗಿ ಚಂದ್ರಾವತಿ ಮತ್ತು ಅರ್ಜುನ್ ಅವರನ್ನು ಆಯ್ಕೆ ಮಾಡಲಾಯಿತು. ನಂತರ ನಡೆದ 27ನೇ ವರ್ಷದ ಗೌರಿಗಣೇಶೋತ್ಸವದ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಎಂ.ಎನ್. ಹರೀಶ್‍ಕುಮಾರ್, ಉಪಾಧ್ಯಕ್ಷರಾಗಿ ಪಿ.ಎಂ. ಸುರೇಶ್, ಕೆ.ಟಿ. ಗೀತ, ಕಾರ್ಯದರ್ಶಿಯಾಗಿ ಬಿ.ಎಂ. ದೇವಾನಂದ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮವನ್ನು ಸಿ.ಎಂ. ನಿಕೇಶ್ ಸ್ವಾಗತಿಸಿದರು. ಕೆ.ಎನ್. ಅವಿನಾಶ್ ನಿರೂಪಿಸಿದರು, ಬಿ.ಎಂ. ಶಿವಕಾಂತ್ ವಂದಿಸಿದರು.