ಚೆಟ್ಟಳ್ಳಿ, ಜು. 4: ಸುನ್ನಿ ಜಂಇಯ್ಯತುಲ್ ಮುಹಲ್ಲಿಮೀನ್ ರೇಂಜ್ ವತಿಯಿಂದ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಯಾಕೂಬ್ ಬಜೆಗುಂಡಿ ಹಾಗೂ ಜಿಲ್ಲಾ ವಕ್ಫ್ ಸದಸ್ಯ ಅಬ್ದುಲ್ ಹಫೀಲ್ ಸಾದಿಯ ಅವರನ್ನು ಸೋಮವಾರಪೇಟೆಯ ಕರ್ಕಳ್ಳಿಯಲ್ಲಿಯಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರೇಂಜ್ ಅಧ್ಯಕ್ಷ ಅಬೂಬಕ್ಕರ್ ಮದನಿ, ಕಾರ್ಯದರ್ಶಿ ಹಸೈನಾರ್ ಮುಸ್ಲಿಯಾರ್, ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ, ಎಸ್.ಜೆ.ಎಂ. ಜಿಲ್ಲಾ ಕಾರ್ಯದರ್ಶಿ ಹಂಝ ಮುಸ್ಲಿಯಾರ್, ಮುನೀರ್ ಸಅದಿ, ರಫೀಖ್ ಸಅದಿ ಹಾಗೂ ಕರ್ಕಳ್ಳಿ ಮದ್ರಸ ಅಧ್ಯಕ್ಷ ಅಬ್ಬಾಸ್ ಭಾಗವಹಿಸಿದ್ದರು.