ಶನಿವಾರಸಂತೆ, ಜು. 3: ಶನಿವಾರಸಂತೆ ಲಯನ್ಸ್ ಕ್ಲಬ್‍ನ ಮಾಸಿಕ ಸಭೆ ಇಲ್ಲಿನ ಭಾರತೀ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನಡೆಸಲಾಗಿ ಉಪಾಧ್ಯಕ್ಷ ಎನ್.ಬಿ. ನಾಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲಯನ್ಸ್ ಕ್ಲಬ್‍ನ ಕಾರ್ಯದರ್ಶಿ ಬಿ.ಕೆ. ಚಿಣ್ಣಪ್ಪ ಅವರು ಮಾತನಾಡಿ, ಕ್ಲಬ್‍ನ ಹಾಲಿ ಪದಾಧಿಕಾರಿಗಳ ಅವಧಿ ಜುಲೈ ತಿಂಗಳಿಗೆ ಮುಗಿಯುತ್ತಿದ್ದು, ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡು ಮೈಸೂರಿನಲ್ಲಿ ನಡೆಯುವ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಮಾಣ ವಚನವನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು. ಮುಂದಿನ ಸಾಲಿನ ಲಯನ್ಸ್ ಉಪಾಧ್ಯಕ್ಷರಾಗಿ ಎನ್.ಕೆ. ಅಪ್ಪಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು. ಪ್ರಾರಂಭದಲ್ಲಿ ವಿಶ್ವ ಶಾಂತಿಗಾಗಿ 1 ನಿಮಿಷ ಮೌನ ಆಚರಿಸಲಾಯಿತು. ಕ್ಲಬ್‍ನ ಉಪಾಧ್ಯಕ್ಷ ನಾರಾಯಣ ಸ್ವಾಮಿ ಧ್ವಜವಂದನೆ ಮಾಡಿದರು. ಖಜಾಂಚಿ ಎಂ.ಆರ್. ನಿರಂಜನ್ ಸ್ವಾಗತಿಸಿದರು. ಕ್ಲಬ್‍ನ ಉಪಾಧ್ಯಕ್ಷ ಬಿ.ಸಿ ಧರ್ಮಪ್ಪ ವಂದಿಸಿದರು.