ಮಡಿಕೇರಿ, ಜು. 3: ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್, ಜಿ.ಟಿ. ರಸ್ತೆ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎನ್.ಬಿ. ಪಾಲಾಕ್ಷ ಅವರು ವಯೋನಿವೃತ್ತಿ ಹೊಂದಿದ್ದು, ಇವರನ್ನು ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಬೀಳ್ಕೊಡಲಾಯಿತು.
ಈ ಸಂದರ್ಭ ಬ್ಯಾಂಕಿನ ಅಧ್ಯಕ್ಷ ಸಿ.ಕೆ. ಬಾಲಕೃಷ್ಣ, ಉಪಾಧ್ಯಕ್ಷ ಬಿ.ಎಂ. ರಾಜೇಶ್, ನಿರ್ದೇಶಕರು ಗಳಾದ ಕೋಡಿ ಚಂದ್ರಶೇಖರ್, ಬಿ. ರಾಜೇಶ್ ಯಲ್ಲಪ್ಪ, ಬಿ.ಕೆ. ಜಗದೀಶ್, ಜಿ.ಎಂ. ಸತೀಶ್ ಪೈ, ಎಸ್.ಸಿ. ಸತೀಶ್, ಕಾವೇರಮ್ಮ ಸೋಮಣ್ಣ, ಬಿ.ಪಿ. ಮಾಚಮ್ಮ (ಈಶ್ವರಿ), ಕನ್ನಂಡ ಎ. ಸಂಪತ್, ಆರ್. ಗಿರೀಶ್, ಬಿ.ವಿ. ರೋಷನ್, ಎ. ಗೋಪಾಲಕೃಷ್ಣ ಹಾಗೂ ವ್ಯವಸ್ಥಾಪಕ ಕೆ. ಪದ್ಮನಾಭ ಕಿಣಿ ಹಾಗೂ ಸಿಬ್ಬಂದಿ ಹಾಜರಿದ್ದರು. ಕಾರ್ಯಕ್ರಮವನ್ನು ಜಿ.ಬಿ. ರಮೇಶ್ ನಿರೂಪಿಸಿದರು.