ವೀರಾಜಪೇಟೆ, ಜು. 3: ಸರ್ಕಾರದ ಯೋಜನೆಗಳು ಕಡತದಲ್ಲಿ ಕೊನೆಗೊಂಡಿರುವಂತಿದೆ. ಜನಪ್ರತಿನಿಧಿಗಳು ಕಂಡು ಕಾಣದ ರೀತಿಯ ವರ್ತನೆ ಮಾಡುತ್ತಿದ್ದಾರೆ. ಅಧಿಕಾರಿಗಳು ಭರವಸೆಯನ್ನು ನೀಡಿ ಸುಮ್ಮನಾಗಿದ್ದರೆ. ಅಭಿವೃದ್ಧಿ ಕಾಣದ ಗ್ರಾಮವು ತನ್ನ ಸಮಸ್ಯೆಗಳನ್ನು ಒಡಲಿನಲ್ಲಿ ತುಂಬಿಕೊಂಡು ಶಾಪಗ್ರಸ್ತ ವಾದಂತಿದೆ ತೊತೇರಿ ಗ್ರಾಮ.

ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ರುದ್ರಗುಪ್ಪೆ ತೊತೇರಿ ಗ್ರಾಮದಲ್ಲಿ ರಸ್ತೆ, ಕಿರು ಸೇತುವೆ, ಸಾರಿಗೆ ವ್ಯವಸ್ಥೆ ಮತ್ತು ಕಾಡಾನೆಗಳ ಉಪಟಳ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಪ್ರತಿಭಟನೆ ಮಾಡಲಾಗುವದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ನಾಂಗಾಲ, ತೊತೇರಿ ಮತ್ತು ವಿ. ಬಾಡಗ ಗ್ರಾಮದವರೆಗೆ 10 ಕಿ.ಮೀ. ರಸ್ತೆಯು ತೀರಾ ಹದಗೆಟ್ಟಿದ್ದು ಮೂರು ಅಡಿಗೆ ಒಂದರಂತೆ ಗುಂಡಿಗಳ ದರ್ಶನವಾಗುತ್ತದೆ. ಈ ಭಾಗದಲ್ಲಿ ಹೆಚ್ಚು ಮಳೆ ಬೀಳುವದರಿಂದ ರಸ್ತೆ ವೀರಾಜಪೇಟೆ, ಜು. 3: ಸರ್ಕಾರದ ಯೋಜನೆಗಳು ಕಡತದಲ್ಲಿ ಕೊನೆಗೊಂಡಿರುವಂತಿದೆ. ಜನಪ್ರತಿನಿಧಿಗಳು ಕಂಡು ಕಾಣದ ರೀತಿಯ ವರ್ತನೆ ಮಾಡುತ್ತಿದ್ದಾರೆ. ಅಧಿಕಾರಿಗಳು ಭರವಸೆಯನ್ನು ನೀಡಿ ಸುಮ್ಮನಾಗಿದ್ದರೆ. ಅಭಿವೃದ್ಧಿ ಕಾಣದ ಗ್ರಾಮವು ತನ್ನ ಸಮಸ್ಯೆಗಳನ್ನು ಒಡಲಿನಲ್ಲಿ ತುಂಬಿಕೊಂಡು ಶಾಪಗ್ರಸ್ತ ವಾದಂತಿದೆ ತೊತೇರಿ ಗ್ರಾಮ.

ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ರುದ್ರಗುಪ್ಪೆ ತೊತೇರಿ ಗ್ರಾಮದಲ್ಲಿ ರಸ್ತೆ, ಕಿರು ಸೇತುವೆ, ಸಾರಿಗೆ ವ್ಯವಸ್ಥೆ ಮತ್ತು ಕಾಡಾನೆಗಳ ಉಪಟಳ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಪ್ರತಿಭಟನೆ ಮಾಡಲಾಗುವದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ನಾಂಗಾಲ, ತೊತೇರಿ ಮತ್ತು ವಿ. ಬಾಡಗ ಗ್ರಾಮದವರೆಗೆ 10 ಕಿ.ಮೀ. ರಸ್ತೆಯು ತೀರಾ ಹದಗೆಟ್ಟಿದ್ದು ಮೂರು ಅಡಿಗೆ ಒಂದರಂತೆ ಗುಂಡಿಗಳ ದರ್ಶನವಾಗುತ್ತದೆ. ಈ ಭಾಗದಲ್ಲಿ ಹೆಚ್ಚು ಮಳೆ ಬೀಳುವದರಿಂದ ರಸ್ತೆ ಸಾರಿಗೆ ವ್ಯವಸ್ಯೆ

ಬಿಟ್ಟಂಗಾಲ ಮುಖ್ಯರಸ್ತೆಯಿಂದ ನಾಂಗಾಲ, ತೊತೇರಿ ವಿ.ಬಾಡಗ ರಸ್ತೆಯು ದುರಸ್ತಿಗೊಳಿಸದಿರುವದರಿಂದ ದಶಕಗಳಿಂದ ಖಾಸಗಿ ಬಸ್ಸು ಸಂಚಾರವು ಸ್ಥಗಿತಗೊಂಡಿದೆ. ಈ ಭಾಗಕ್ಕೆ ಸರ್ಕಾರಿ ಸಾರಿಗೆ ಇಲಾಖೆಯಿಂದ ಬಸ್ಸು ಸಂಚಾರ ಆರಂಭವಾಗಿ ಕೆಲವು ತಿಂಗಳ ಬಳಿಕ 8 ವರ್ಷಗಳ ಹಿಂದೆಯೇ ಸಂಚಾರವು ಸ್ಥಗಿತಗೊಂಡಿದೆ. ಇದರಿಂದ ಶಾಲಾ ಕಾಲೇಜು ಮಕ್ಕಳು ಬಿಟ್ಟಂಗಾಲ ಜಂಕ್ಷನ್‍ನಿಂದ 6 ಕಿ.ಮಿ ಕಾಲುನಡಿಗೆ ಯಲ್ಲಿ ಸಂಚರಿಸುವದು ಅನಿವಾರ್ಯ ವಾಗಿ ಮಳೆಗಾಲದಲ್ಲಿ ನೀರು ರಸ್ತೆಯ ಮೇಲೆ ಹರಿಯುವದರಿಂದ ಸಂಚಾರವು ಸ್ಥಗಿತಗೊಳ್ಳುತ್ತದೆ ಸಾರಿಗೆ ವ್ಯವಸ್ಥೆಯಿಂದ ಕಂಗಾಲಾಗಿರುವ ಗ್ರಾಮಸ್ಥರು, ಕೂಲಿ ಕಾರ್ಮಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೌಲಭ್ಯ ವಂಚಿತರಾಗಿದ್ದಾರೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಕೆ.ಕೆ.ಕಾಶಿ ತಿಳಿಸಿದ್ದಾರೆ.

ಕಾಡಾನೆ ಸಮಸ್ಯೆ

10 ರಿಂದ 20 ಆನೆಗಳ ಹಿಂಡು ತೋಟಗಳಿಗೆ ಲಗ್ಗೆಯಿಟ್ಟು ಫಸಲು ನಾಶ ಮಾಡುವದು ಸಾಮಾನ್ಯವಾಗಿದೆ ಕೃಷಿ, ಗದ್ದೆಗಳಿಗೆ ದಾಳಿ ಮಾಡಿ ಫಸಲು ನೆಲಕಚ್ಚಿದೆ. ದಾಳಿಯಿಂದ ಬೇಸತ್ತು ಬೆಳೆ ಬೆಳೆಯುವದನ್ನು ನಿಲ್ಲಿಸಿದ್ದಾರೆ ಕಾಡಾನೆ ಸಮಸ್ಯೆಯನ್ನು ಇಲಾಖೆಯ ಗಮನಕ್ಕೆ ತಂದಲ್ಲಿ ಅಲ್ಪ ಪ್ರಮಾಣದ ಪರಿಹಾರ ಒದಗಿಸಿ ಸುಮ್ಮನಾಗಿದ್ದಾರೆ. ಕಾಡಾನೆ ದಾಳಿಯನ್ನು ನಿಯಂತ್ರಿಸುವಲ್ಲಿ ಇಲಾಖೆಯು ವಿಫಲಗೊಂಡಿದೆ. ವೈಜ್ಞಾನಿಕ ರೀತಿಯಲ್ಲಿ ಶಾಶ್ವತ ಪರಿಹಾರಕ್ಕೆ ಅರಣ್ಯ ಇಲಾಖೆಯು ಮುಂದಾಗಬೇಕು.

ಅರಣ್ಯ ಅಂಚಿನಲ್ಲಿ ಶಾಶ್ವತ ಕಂದಕ ನಿರ್ಮಾಣ ಮಾಡಿ ನಿಯಂತ್ರಣ ಮಾಡಬೇಕು ಎಂದು ಪಿ.ಎಂ. ತಿಮ್ಮಯ್ಯ ಒತ್ತ್ತಾಯ ಪಡಿಸಿದ್ದಾರೆ. ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಒಂದನೇ ರುದ್ರಗುಪ್ಪೆ ತೊತೇರಿ ಗ್ರಾಮದ ಸಮಸ್ಯೆಗಳು ದಶಕಗಳಿಂದ ಇದ್ದು, ಯಾವದೇ ಅಭಿವೃದ್ಧಿ ಯೋಜನೆಗಳಿಗೆ ಮುಂದಾಗದೆ ಗ್ರಾಮವನ್ನು ಕಡೆಗಣಿಸಲಾಗಿದೆ ಈ ಬಗ್ಗೆ ಕೂಡಲೇ ಸ್ಪಂದಿಸದಿದ್ದರೆ ತಾಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸ ಲಾಗುವದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಜಿ.ಪಂ. ಸದಸ್ಯೆ ಪ್ರತಿಕ್ರಿಯೆ

ತೊತೇರಿ ಗ್ರಾಮದ ರಸ್ತೆಗೆ ಸಂಬಂಧಿಸಿದಂತೆ ಕ್ಷೇತ್ರದ ಶಾಸಕರ ಅನುದಾನದಲ್ಲಿ ರೂ. 10 ಲಕ್ಷ ಕಾಯ್ದಿರಿಸಲಾಗಿದೆ. ಗ್ರಾಮ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲು ಅನುದಾನದ ಕೊರತೆಯಿದೆ. ರಸ್ತೆ ಮತ್ತು ಕಿರು ಸೇತುವೆಗಳ ಮರು ನಿರ್ಮಾಣ ಕಾರ್ಯಗಳಿಗೆ ವಿಶೇಷ ಅನುದಾನ ನೀಡುವಂತೆ ಮುಂದಿನ ಸಭೆಯಲ್ಲಿ ಮನವಿ ಸಲ್ಲಿಸುತ್ತೇನೆ ಎಂದು ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ ತಿಳಿಸಿದ್ದಾರೆ.

ತೊತೇರಿ ಗ್ರಾಮದ ಪ್ರಮುಖ ರಾದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎ ಗಣೇಶ್, ಕೆ.ಎ. ಅಯ್ಯಣ್ಣ, ಭೀಮೇಶ್, ಕೆ.ಎಂ. ಅಯ್ಯಪ್ಪ, ಪಿ.ಎಸ್. ತಿಮ್ಮಯ್ಯ, ಕೆ.ಕೆ. ಅಪ್ಪಯ್ಯ, ಬಿ.ಜಿ. ಕಿರಣ್, ಕೆ.ಜಿ. ಜಗನ್ ಹಾಗೂ 30ಕ್ಕೂ ಅಧಿಕ ಮಂದಿ ಗ್ರಾಮಸ್ಥರು ಹಾಜರಿದ್ದರು.

- ಕೆ.ಕೆ.ಎಸ್., ವೀರಾಜಪೇಟೆ