ಮಡಿಕೇರಿ, ಜು. 3: ಮಡಿಕೇರಿಯ ನಮ್ಮ ಹಿಂದೂಸ್ತಾನಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿ ಸಂಘವನ್ನು ಉದ್ಘಾಟನೆ ಮಾಡಲಾಯಿತು. ತಾತ್ಕಾಲಿಕವಾಗಿ ಸಂಘಕ್ಕೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಾಜಿ ನಗರಸಭಾ ಸದಸ್ಯ ಕೆ.ಜಿ. ಪೀಟರ್, ಉಪಾದ್ಯಕ್ಷರಾಗಿ ವಾಜಿದ್, ಕಾರ್ಯದರ್ಶಿಯಾಗಿ ಜಿ.ಎಂ. ಮೊಹಮ್ಮದ್ ಶರೀಫ್, ಖಜಾಂಚಿಯಾಗಿ ಖಲೀಲ್, ಸಹಕಾರ್ಯದರ್ಶಿಯಾಗಿ ವಿನು ಅವರನ್ನು ಆಯ್ಕೆ ಮಾಡಲಾಯಿತು. ಸಲಹಾ ಸಮಿತಿ ಹಾಗೂ ಸೋಶಿಯಲ್ ಮೀಡಿಯಾಗೆ ಝಮೀರ್, ಜಗ್ಗಾ, ರವಿ, ಸಮೀರ್ ಹಾಗೂ ಅಂಜುಮ್ ಅವರನ್ನು ಆಯ್ಕೆ ಮಾಡಲಾಯಿತು.
ಮುಂದಿನ ಸಭೆಯಲ್ಲಿ ಶಾಲಾಭಿವೃದ್ಧಿಯ ಬಗ್ಗೆ ಹಾಗೂ ಹಳೆಯ ಎಲ್ಲಾ ವಿದ್ಯಾರ್ಥಿಗಳನ್ನು ಒಂದುಗೂಡಿಸಲು ತೀರ್ಮಾನಿಸಲಾಯಿತು.