ಮಡಿಕೇರಿ, ಜು. 3: ಹಾಕತ್ತೂರು ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ಹಾಕತ್ತೂರು, ಕಗ್ಗೋಡ್ಲು ಗ್ರಾಮಗಳ ವಾರ್ಡ್ ಸಭೆಯನ್ನು ತಾ. 5 ರಂದು ಆಯಾಯ ಗ್ರಾಮ ಪಂಚಾಯಿತಿ ಸದಸ್ಯರ ಅಧ್ಯಕ್ಷತೆಯಲ್ಲಿ ಹಾಗೂ 2019-20ನೇ ಸಾಲಿನ ಗ್ರಾಮ ಸಭೆಯನ್ನು ತಾ. 18 ರಂದು ಪೂರ್ವಾಹ್ನ 10.30 ಗಂಟೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂದ್ರೀರ ಶಾರದ ಅವರ ಅಧ್ಯಕ್ಷತೆಯಲ್ಲಿ ಹಾಗೂ ನೋಡೆಲ್ ಅಧಿಕಾರಿ ಶ್ರೀಕಂಠಯ್ಯ ಅವರ ಸಮ್ಮುಖದಲ್ಲಿ ಹಾಕತ್ತೂರು ಗ್ರಾಮದ ಕುವೆಂಪು ಶತಮಾನೋತ್ಸವ ಶಾಲಾ ಸಭಾಂಗಣದಲ್ಲಿ ನಡೆಸಲಾಗುವದು.
ತಾ. 5 ರಂದು ಕಗ್ಗೋಡ್ಲು ಹೂಕಾಡು ಪೈಸಾರಿ ಅಂಗನವಾಡಿ ಕೇಂದ್ರದಲ್ಲಿ ಪೂರ್ವಾಹ್ನ 10.30 ಗಂಟೆಗೆ ಎಂ.ಆರ್. ಶಾರದ ಅವರ ಅಧ್ಯಕ್ಷತೆಯಲ್ಲಿ, ತಾ. 5 ರಂದು ಹುಲಿತಾಳ ಸಮುದಾಯ ಭವನದಲ್ಲಿ ಅಪರಾಹ್ನ 2.30 ಗಂಟೆಗೆ ಪಿ.ಎಸ್. ವಿಷ್ಣುಕುಮಾರ್ ಅಧ್ಯಕ್ಷತೆಯಲ್ಲಿ, ತಾ. 5 ರಂದು ಚೂರಿಕಾಡು ಸ್ವಸಹಾಯ ಸಂಘದ ಸಭಾಂಗಣದಲ್ಲಿ ಅಪರಾಹ್ನ 4 ಗಂಟೆಗೆ ಪಿ.ಈ. ದೇವಿಪ್ರಸಾದ್ ಅಧ್ಯಕ್ಷತೆಯಲ್ಲಿ ಹಾಗೂ ತಾ. 18 ರಂದು ಗ್ರಾಮಸಭೆ ಪೂರ್ವಾಹ್ನ 10.30 ಗಂಟೆಗೆ ಮಂದ್ರೀರ ಶಾರದ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.