ಮಡಿಕೇರಿ, ಜು. 3: ನಗರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಮನೆ ಮನೆ ಕಸ ಸಂಗ್ರಹಣೆ ಮಾಡುತ್ತಿದ್ದು, ಸಾರ್ವಜನಿಕರು ಮತ್ತು ಉದ್ದಿಮೆದಾರರು ಕಸವನ್ನು ಮನೆಯಲ್ಲಿಯೇ ವಿಂಗಡಣೆ ಮಾಡಿ ನಗರಸಭೆ ವಾಹನಕ್ಕೆ ನೀಡುವದು ಹಾಗೂ ಯಾವದೇ ರೀತಿಯ ಪ್ಲಾಸ್ಟಿಕ್ ಬಳಸದೆ ಸ್ವಚ್ಛತೆಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತ ಎಂ.ಎಲ್. ರಮೇಶ್ ಅವರು ಕೋರಿದ್ದಾರೆ.

ಕಸ ಬೇರ್ಪಡಿಸುವಿಕೆಯ ಮಾರ್ಗಸೂಚಿಗಳು: ಹಸಿ ಕಸ: ಅಡುಗೆ ಮನೆ ಕಸ, ತರಕಾರಿ, ಹಣ್ಣುಗಳು ಸಿಪ್ಪೆಗಳು ಅಳಿದುಳಿದ ಅನ್ನಪದಾರ್ಥಗಳು ಮೊಟ್ಟೆಯ ಚಿಪ್ಪುಗಳು ಕೋಳಿ, ಮೀನು, ಮಾಂಸ ಮೂಳೆಗಳು, ಖಾದ್ಯ ಪದಾರ್ಥಗಳಿಗೆ ಅಂಟಿದ ಟಿಶ್ಯೂ ಪೇಪರ್, ಚಹಾ, ಕಾಫಿ ಪುಡಿ, ಟಿ ಬ್ಯಾಗ್‍ಗಳು ಬಾಳೆಎಲೆ ತೋಟದ ಕಸ, ಬಿದ್ದ ಎಲೆಗಳು, ಕೊಂಬೆಗಳು, ಪೂಜಾ ಹೂಗಳು, ಹೂಮಾಲೆ ಕಳೆ.

ಒಣ ಕಸ: ವಿಲೇವಾರಿಗೆ ಮಾತ್ರ ಉಪಯೋಗಿಸಹುದಾದ ಚೀಲಗಳಲ್ಲಿ ಬಳಸಿ (ಪ್ಲಾಸ್ಟಿಕ್ ಮಣ್ಣಾಗಿದ್ದರೆ ತೊಳೆಯಬೇಕು) ಪ್ಲಾಸ್ಟಿಕ್ ಕವರ್, ಬಾಟಲಿಗಳು, ಡಬ್ಬಿಗಳು, ಇತರ ವಸ್ತುಗಳು, ಚಿಪ್ಸ್, ಮಿಠಾಯಿ ಹೊದಿಕೆಗಳು, ಪ್ಲಾಸ್ಟಿಕ್ ಬಟ್ಟಲುಗಳು, ಹಾಲು, ಮೊಸರು ಪ್ಯಾಕೆಟ್‍ಗಳು. ಕಾಗದ (ಮಣ್ಣಾಗಿದ್ದರೆ ತೊಳೆಯಬೇಕು), ಲೇಖನ ಸಾಮಗ್ರಿ, ಜಂಕ್ ಮೇಲ್ ರಟ್ಟಿನ ಡಬ್ಬಿಗಳು, ಪಿಜ್ಜಾ ಡಬ್ಬಿಗಳು, ಟೆಟ್ರಾಪ್ಯಾಕ್, ಪೇಪರ್ ಬಟ್ಟಲುಗಳು ಮತ್ತು ಪ್ಲೇಟುಗಳು.(ಎಚ್ಚರಿಕೆಯಿಂದ ನಿಭಾಯಿಸಿರಿ) ಗಾಜು, ಒಡೆಯದ ಗಾಜಿನ ಬಾಟಲಿಗಳು, ಇತರ ಒಣ ಕಸ, ರಬ್ಬರ್. ಥರ್ಮೋಕೋಲ್, ಹಳೆಯ ಒರೆಸುವ ಬಟ್ಟೆ, ಡಸ್ರ್ಟ, ಸ್ಪಂಜುಗಳು, ಸೆರಾಮಿಕ್ಸ್, ಕಟ್ಟಿಗೆ ತುಣುಕುಗಳನ್ನು, ತೆಂಗಿನ ಚಿಪ್ಪುಗಳು. ಈ ತ್ಯಾಜ್ಯ ಬ್ಯಾಟರಿಗಳು, ಸಿಡಿಗಳು, ಟೇಪ್ಸ್, ಥರ್ಮಾಮೀಟರ್, ಬಲ್ಬ್, ಟ್ಯೂಬ್ ದೀಪಗಳು, ಸಿಎಫ್‍ಎಲ್ (ಪ್ರತ್ಯೇಕವಾಗಿ ಒಪ್ಪಿಸಬೇಕು).

ಬೇಡವಾದ ಕಸ: ನೈರ್ಮಲ್ಯದ ಕಸ ಡೈಪರ್‍ಗಳು, ಸ್ಯಾನಿಟರಿ ನ್ಯಾಪ್ ಕಿನ್ಸ್, ಬ್ಯಾಂಡೇಜ್, ಉಪಯೋಗಿಸಿದ ಟಿಶ್ಯುಗಳು, ಔಷಧಿಗಳು, ಗುಡಿಸಿದ ಧೂಳು. ತೀಕ್ಷ ಬ್ಲೇಡ್, ಉಪಯೋಗಿಸಿದ ಸಿರಿಂಜುಗಳು, ಇಂಜೆಕ್ಷನ್ ಟ್ಯೂಬ್‍ಗಳು, ನಿರ್ಮಾಣ ಅವಶೇಷಗಳು (ಪ್ರತ್ಯೇಕವಾಗಿ ಒಪ್ಪಿಸಬೇಕು) ರಬ್ಬರ್, ಪೇಂಟ್ಸ್, ತೂಬುಗಳಲ್ಲಿನ ಹೂಳು, ಸಿಮೆಂಟ್ ಪುಡಿ, ಇಟ್ಟಿಗೆಗಳು, ಹೂವಿನ ಮಡಿಕೆಗಳು, ಒಡೆದ ಗಾಜು, ಕ್ಯಾಂಪಸ್ ತೋಟಗಳಿಂದ ತೋಟದ ಕಸ ಪ್ರತ್ಯೇಕವಾಗಿ ವಿಲೇವಾರಿ ಮಾಡಲಾಗುತ್ತದೆ. ಹಾಳಾದ ಕೊಳವೆ ದೀಪಗಳು ಮತ್ತು ಬಲ್ಬ್‍ಗಳನ್ನು ಪ್ರತ್ಯೇಕವಾಗಿ ಕೊಡಬೇಕು. ನೆಲಮಾಳಿಗೆಯಲ್ಲಿ ಈ ವಸ್ತುಗಳಿಗೆ ಪ್ರತ್ಯೇಕ ಬಿನ್ ಇದೆ. ನೆಲಮಾಳಿಗೆಯಲ್ಲಿ ತೀಕ್ಷ್ಣ ವಸ್ತುಗಳಿಗೆ ಪ್ರತ್ಯೇಕ ಬಿನ್ ಇದೆ. ದೊಡ್ಡ ಪ್ರಮಾಣದಲ್ಲಿನ ನಿರ್ಮಾಣ ಅವಶೇಷಗಳಿಗೆ ಪ್ರತಿ ಹೊರಗೆ ಹೆಚ್ಚುವರಿ ದರ ವಿಧಿಸಲಾಗುವದು.