ಗೋಣಿಕೊಪ್ಪ ವರದಿ, ಜು. 1: ಕಾರು-ಸ್ಕೂಟರ್ ನಡುವೆ ಡಿಕ್ಕಿಯಾಗಿ ಸವಾರ ಸಾವನಪ್ಪಿದ್ದಾರೆ. ವೀರಾಜಪೇಟೆಯ ವಿಜಯನಗರದ ನಿವಾಸಿ ಇತಿಯನ್ ಅವರ ಪುತ್ರ ಶೋಯಬ್ ಅಫ್ರಿನ್ (23) ಮೃತ ಸವಾರ.

ಸೋಮವಾರ ಸಂಜೆ ದೇವರಪುರದಲ್ಲಿ ಘಟನೆ ನಡೆದಿದ್ದು, ಸವಾರ ಶೋಯಬ್ ಸ್ಥಳದಲ್ಲಿಯೇ ಸಾವನಪ್ಪಿದರು. ತಿತಿಮತಿ ಕಡೆಗೆ ತೆರಳುತ್ತಿದ್ದ ಸ್ಕೂಟರ್‍ಗೆ ಮೈಸೂರು ಕಡೆಯಿಂದ ಕೇರಳದತ್ತ ಬರುತ್ತಿದ್ದ ಕಾರು ಡಿಕ್ಕಿಯಾಯಿತು. ಇದರಿಂದ ಸ್ಕೂಟರ್ ಸವಾರ ಶೋಯಬ್ ಸಾವನಪ್ಪಿದರು. ಈ ಬಗ್ಗೆ ಪೊನ್ನಂಪೇಟೆ ಪೊಲೀಸರು ಕ್ರಮಕೈಗೊಂಡಿದ್ದಾರೆ. -ಸುದ್ದಿಪುತ್ರ