ವೀರಾಜಪೇಟೆ: ಶಾಲಾ-ಕಾಲೇಜು ಅವರಣದಲ್ಲಿ ವಿವಿಧ ಜಾತಿ ಪಲ ನೀಡುವ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವೀರಾಜಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಅವರಣದಲ್ಲಿ ಕಾಲೇಜಿನ ಎನ್.ಎಸ್.ಎಸ್. ಘಟಕ ಮತ್ತು ಪರಂಜ್ಯೋತಿ ಮಾನವ ಸೇವಾ ಸಂಸ್ಥೆಯ ಸಂಯುಕ್ತ ಅಶ್ರಯದಲ್ಲಿ ವಿವಿಧ ಜಾತಿಯ ನೂರಕ್ಕೂ ಅಧಿಕ ಹಣ್ಣುಹಂಪಲು ನೀಡುವ ಗಿಡಗಳನ್ನು ನೆಡಲಾಯಿತು. ಸಂಸ್ಥೆಯ ಸದಸ್ಯ ಮಾದಪ್ಪ ಪರಿಸರವನ್ನು ಉಳಿಸಬೇಕು ಎಂದು ಹೇಳಿದರು.
ರಾಮಕೃಷ್ಣ ಮಾತನಾಡಿ ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.
ಸಂಸ್ಥೆಯ ಸದಸ್ಯರುಗಳಾದ ಶಾಂತಿ ತಿಮ್ಮಯ್ಯ, ಶೋಭ, ಧರಣಿ ಸೋಮಣ್ಣ, ಲತಾ ಕಾವ್ಯ, ಪ್ರಭಉತ್ತಪ್ಪ ಮತ್ತು ಕಾಲೇಜಿನ ಎನ್.ಎನ್.ಎಸ್. ಘಟಕದ ಮುಖ್ಯಸ್ಥ ದಿನೇಶ್, ಉಪನ್ಯಾಸಕ ಡಾ. ಎಸ್.ಹೆಚ್. ಖಂಡೋಬಾ ಅವರುಗಳು ಹಾಜರಿದ್ದರು.ಕರಿಕೆ: ಸಂಪಾಜೆ ವಲಯ ಅರಣ್ಯ ಇಲಾಖೆ ವತಿಯಿಂದ ದೇವರಕೊಲ್ಲಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬೀಜದುಂಡೆ ಮತ್ತು ವನ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪಾಜೆ ಉಪವಲಯ ಅರಣ್ಯಾಧಿಕಾರಿ ವಿಜಯೇಂದ್ರಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಂದ್ರ, ಅರಣ್ಯ ರಕ್ಷಕರಾದ ಜಗನ್ನಾಥ, ದೊಡ್ಡಯ್ಯ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಸೋಮವಾರಪೇಟೆ: ಶಾಂತಳ್ಳಿಯ ಪ್ರಕೃತಿ ಸಾಹಿತ್ಯ ಬಳಗ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಶಾಂತಳ್ಳಿಯ ಅಂಗನವಾಡಿಯಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಅಂಗನವಾಡಿಯ ಆವರಣದಲ್ಲಿ ಗಿಡಗಳನ್ನು ನೆಡಸಲಾಯಿತು. ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಕ.ಸಾ.ಪ. ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಸಾಹಿತ್ಯ ಬಳಗದ ಅಧ್ಯಕ್ಷೆ ರಾಧಿಕ ಕಾಳಪ್ಪ, ಕ.ಸಾ.ಪ ಪದಾಧಿಕಾರಿಗಳಾದ ಜಲಾಕಾಳಪ್ಪ, ಶರ್ಮಿಳ ರಮೇಶ್, ನಳಿನಿ ಗಣೇಶ್, ನ.ಲ. ವಿಜಯ ಮತ್ತಿತರರು ಉಪಸ್ಥಿತರಿದ್ದರು.ಕೂಡಿಗೆ: ಪರಿಸರ ಸಂರಕ್ಷಣೆ ಮಾಡುವ ಮೂಲಕ ತಮ್ಮ ಸುತ್ತಮುತ್ತಲ ಪ್ರದೇಶಗಳನ್ನು ಶುಚಿತ್ವ ಪಡಿಸಿಕೊಳ್ಳುವದರ ಜೊತೆಗೆ ಪರಿಸರ ಸಂರಕ್ಷಣೆಯ ಜವಬ್ದಾರಿಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಾಗ ಪರಿಸರವು ಉತ್ತಮವಾಗಿರುತ್ತದೆ. ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳು ಪರಿಸರದ ಬಗ್ಗೆ ಜಾಗೃತರಾಗಬೇಕು ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್ ಅವರು ಹೇಳಿದರು.
ಹಾರಂಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕೊಡಗು ಜಿಲ್ಲಾ ಕಾವಲುಪಡೆ ನೇತೃತ್ವದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತೋಟಗಾರಿಕಾ ಇಲಾಖೆಯ ಅಧಿಕಾರಿ ವರದರಾಜ್, ಹಾರಂಗಿ ಅಣೆಕಟ್ಟೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೇಗೌಡ ಮಾತನಾಡಿದರು. ಕಾರ್ಯಕ್ರಮ ಆಯೋಜಕರಾದ ಕರ್ನಾಟಕ ಕಾವಲು ಪಡೆಯ ಎಂ. ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ಕಾರ್ಯಕ್ರಮದ ಅಂಗವಾಗಿ ಎಂ. ಕೃಷ್ಣ ಅವರು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳು ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಿದರು. ಈ ಸಂದರ್ಭ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಬಾಸ್ಕರ್ ನಾಯಕ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀದೇವಿ, ಸಹ ಶಿಕ್ಷಕರಾದ ವಸಂತ್, ಶಾರದ, ಜಾನಕಿ, ಶ್ರೀನಿವಾಸ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.