ಮಡಿಕೇರಿ, ಜೂ. 30: ಪ್ರಜ್ವಲ್ ರೇವಣ್ಣ ಸೇವಾ ಸಂಸ್ಥೆ ವತಿಯಿಂದ ಹಾಸನದಲ್ಲಿ ನಡೆದ 2ನೇ ವರ್ಷದ ರಾಜ್ಯ ಮಟ್ಟದ ಆಟೋ ಕ್ರಾಸ್ ರ್ಯಾಲಿಯಲ್ಲಿ ಕೊಡಗಿನ ಯುವ ರ್ಯಾಲಿಪಟುಗಳು ಭಾಗವಹಿಸಿ ಸಾಧನೆಗೈದಿದ್ದಾರೆ.
ಗೋಣಿಕೊಪ್ಪಲುವಿನ ನಾಮೇರ ಅಂಕಿತ್ ಪೊನ್ನಪ್ಪ, 1600 ಸಿಸಿ ವಿಭಾಗದಲ್ಲಿ ದ್ವಿತೀಯ, ಇಂಡಿಯನ್ ಒಪನ್ ವಿಭಾಗದಲ್ಲಿ ತೃತೀಯ, ವೀರಾಜ ಪೇಟೆಯ ಸಿ.ಕೆ ಸೋಮಣ್ಣ 1600 ಸಿಸಿ ಇಂಡಿಯನ್ ಒಪನ್ ವಿಭಾಗದಲ್ಲಿ ಪ್ರಥಮ, ನಾವೀಸ್ ವಿಭಾಗದಲ್ಲಿ ದ್ವಿತೀಯ, ಸೂರಜ್ ಮಂದಣ್ಣ 1100 ಸಿಸಿ ಹಾಗೂ ನಾವೀಸ್ ವಿಭಾಗದಲ್ಲಿ ಪ್ರಥಮ, 800 ಸಿಸಿ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿಕೊಂಡರೆ. ಬೆಸ್ಟ್ ಟ್ಯೂನರ್ ಪ್ರಶಸ್ತಿಯನ್ನು ವೀರಾಜಪೇಟೆಯ ಶಾಫಿ ಅಹ್ಮದ್ ತಮ್ಮ ಮುಡಿಗೇರಿಸಿಕೊಂಡರು.