ಮಡಿಕೇರಿ, ಜೂ. 30: ಕೊಡಗು ವೃತ್ತದ ಉಪ ವಲಯ ಅರಣ್ಯ ಅಧಿಕಾರಿಗಳು ಹಾಗೂ ಮೋಜಣಿದಾರರ ಸಂಘದ ಸಭೆ ಅಧ್ಯಕ್ಷ ಕೆ.ಎಂ. ದೇವಯ್ಯ ಅಧ್ಯಕ್ಷತೆಯಲ್ಲಿ ನಗರದ ಅರಣ್ಯ ಭವನದ ಸಭಾಂಗಣದಲ್ಲಿ ನಡೆಯಿತು.ಉಪ ವಲಯ ಅರಣ್ಯ ಅಧಿಕಾರಿಗಳ ವೇತನ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿ ಕೇಂದ್ರ ಸಂಘ ಕೈಗೊಂಡಿರುವ ಹೋರಾಟಕ್ಕೆ ಕೊಡಗು ವೃತ್ತದ ಸಂಘವು ಸಂಪೂರ್ಣ ಬೆಂಬಲ ನೀಡುವದಾಗಿ ದೇವಯ್ಯ ತಿಳಿಸಿದರು. ಜುಲೈ 31ರ ಒಳಗಾಗಿ ವೇತನ ತಾರತಮ್ಯವನ್ನು ಪರಿಷ್ಕರಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸುವಂತೆ ಕೊಡಗು ಸಂಘವು ತೀರ್ಮಾನ ಕೈಗೊಂಡಿದೆ ಎಂದರು. ಈ ಬಗ್ಗೆ ಜುಲೈ 14 ರಂದು ಸಂಘದ ಸಭೆಯನ್ನು ಕರೆಯಲಾಗಿದೆ. ಸಭೆಗೆ ಹೆಚ್ಚಿನ ಸಂಖ್ಯೆಯ ಉಪ ವಲಯ ಅರಣ್ಯ ಅಧಿಕಾರಿಗಳು ಭಾಗವಹಿಸಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವದಾಗಿ ದೇವಯ್ಯ ತಿಳಿಸಿದರು.ಸಭೆಯಲ್ಲಿ ಪ್ರಧಾನÀ ಕಾರ್ಯ ದÀರ್ಶಿ ಕೆ.ಪಿ. ರಂಜನ್ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.