ಚೆಟ್ಟಳ್ಳಿ, ಜೂ. 30: ನೆಲ್ಲಿಹುದಿಕೇರಿಯ ದಾರುನ್ನಜಾತ್ ಎಜುಕೇಶನಲ್ ಅಕಾಡೆಮಿ ಇದರ ನೂತನ ಮಹಿಳಾ ಶರೀಅತ್ ಕಾಲೇಜಿನ ಉದ್ಘಾಟನೆ ಯನ್ನು ಸೈಯದ್ ವಿ.ಪಿ.ಎಸ್. ಮುತ್ತುಕೋಯ ತಂಙ್ಞಳ್ ಅಲ್ ಬುಖಾರಿ ನೆರವೇರಿಸಿದರು. ಮಾತನಾಡಿದ ಹಫೀಲ್ ಗ್ರಾಮದ ಸುತ್ತಮುತ್ತಲಿನ 10ನೇ ತರಗತಿಯನ್ನು ಪೂರೈಸಿದ ಮುಸ್ಲಿಂ ವಿದ್ಯಾರ್ಥಿಗಳು ಇದರ ಸದುಪಯೋಗ ವನ್ನು ಪಡೆದು ಧಾರ್ಮಿಕ ಮತ್ತು ಭೌತಿಕ ವಿದ್ಯಾಭ್ಯಾಸ ವನ್ನು ಪಡೆಯುವಂತೆ ಸಲಹೆ ನೀಡಿದರು. ಸಮಿತಿ ಅಧ್ಯಕ್ಷ ಮುಸ್ತಫ, ಕೋಶಾಧಿಕಾರಿ ಅಬ್ದುಲ್ಲಾ, ಸಹ ಕಾರ್ಯದರ್ಶಿ ರಶಾದ್, ಮಜೀದ್ ಅಲವಿ ಹಾಜಿ, ಹಂಸ ಇದ್ದರು. ಸಂಸ್ಥೆಯ ಪ್ರಾಧ್ಯಾಪಕ ಜುಬೈರ್ ಸಹದಿ ನಿರೂಪಿಸಿದರು.