ಮಡಿಕೇರಿ, ಜೂ. 29: ಮೈಸೂರಿನ ಸೈಕಲ್ ಪ್ಯೂರ್ ಅಗರಬತ್ತಿ, ಕೊಡಗು ಫಾರ್ ಟುಮಾರೋ ಸಂಸ್ಥೆಯ ಸಹಯೋಗ ದೊಂದಿಗೆ ಕೂಡಿಗೆ ಸೈನಿಕ ಶಾಲೆಯಲ್ಲಿ ಸಸಿ ನೆಡುವ ಅಭಿಯಾನವನ್ನು ಆಯೋಜಿಸಲಾಗಿತ್ತು. ಪ್ರಸ್ತುತ ಅಭಿಯಾನದಲ್ಲಿ ಸೈಕಲ್ ಪ್ಯೂರ್ ಅಗರಬತ್ತಿ ಮತ್ತು ಸೈನಿಕ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಅಭಿಯಾನದಲ್ಲಿ ರೀಫಾರೆಸ್ಟ್ ಇಂಡಿಯಾ, ಆರ್ಟ್ ಆಫ್ ಲಿವಿಂಗ್, ಕೊಡವ ರೈಡರ್ಸ್ ಕ್ಲಬ್, ಕೊಡಗು ಅರಣ್ಯ ಇಲಾಖೆ, ಕಾವೇರಿ ನದಿ ರಕ್ಷಿಸಿ ಸಂಘಟನೆ, ಇ-ಕ್ಯೂರ್ ಮೊದಲಾದ ಸಂಘಟನೆಗಳ ಸದಸ್ಯರು ಗಳು 1000ಕ್ಕೂ ಮೀರಿದ ಸಸಿಗಳನ್ನು ಸೈನಿಕ ಶಾಲೆ ಆವರಣದಲ್ಲಿ ನೆಟ್ಟರು.
ಸೈನಿಕ ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದ್ದರು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಕೆ.ಎಂ. ಬೋಪಯ್ಯ ಪ್ರಸ್ತು ಅಭಿಯಾನಕ್ಕೆ ಚಾಲನೆ ನೀಡಿದರು.
ಸೈಕಲ್ ಪ್ಯೂರ್ ಅಗರಬತ್ತೀಸ್‍ನ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ, ಕೊಡಗು ಫಾರ್ ಟುಮಾರೊ ಸಂಸ್ಥೆಯ ಕಾವೇರಪ್ಪ ತಮ್ಮ ಅಭಿಪ್ರಾಯ ಹಂಚಿಕೊಂಡರು.
ರಿಫಾರೆಸ್ಟ್ ಇಂಡಿಯಾ ಸಹಯೋಗದಲ್ಲಿ ಸೈಕಲ್ ಪ್ಯೂರ್, ‘ಕಾವೇರಿ ಕಥೆ’ (ದ ಸ್ಟೋರಿ ಆಫ್ ಕಾವೇರಿ) ಕಿರುಚಿತ್ರವನ್ನು ನಿರ್ಮಿಸುವ ಮೂಲಕ ಕಾವೇರಿ ನದಿಯ ಜ್ವಲಂತ ಸಮಸ್ಯೆಗೆ ಹೊಸ ನೋಟ ಒದಗಿಸಿತು, ಇದು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಮೆಚ್ಚುಗೆಯನ್ನು ಪಡೆಯಿತು.