ಗುಡ್ಡೆಹೊಸೂರು, ಜೂ. 29: ಇಲ್ಲಿಗೆ ಸಮೀಪದ ರಸಲ್‍ಪುರ ಬಾಳುಗೋಡು ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 13 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಶಿಕ್ಷಕಿ ವಿ.ಕೆ. ಗೀತಾ ಅವರನ್ನು ಶಾಲಾ ಶಿಕ್ಷಕ ವೃಂದ ಎಸ್.ಡಿ.ಎಂ.ಸಿ. ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಬೀಳ್ಕೊಟ್ಟರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚೇತನ್, ಸಿ.ಆರ್.ಪಿ. ಸತ್ಯನಾರಾಯಣ ಮತ್ತು ಶಿಕ್ಷಕರಾದ ಕುಮಾರ್, ಆದರ್ಶ, ಎಸ್‍ಡಿಎಂಸಿ ಅಧ್ಯಕ್ಷ ಅಬ್ದುಲ್‍ಖಾದರ್ ಮುಂತಾದವರು ಹಾಜರಿದ್ದರು.