ಸಿದ್ದಾಪುರ, ಜೂ. 29: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವ ವ್ಯಕ್ತಿಯೋರ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಅರೆಕಾಡು ಗ್ರಾಮದಲ್ಲಿ ನಡೆದಿದೆ.

ಅರೆಕಾಡು ಗ್ರಾಮದ ನಿವಾಸಿ ಡಿ.ಬಿ ಯಶು ಎಂಬ ಯುವಕ ಸ್ಥಳೀಯ ನಿವಾಸಿಯಾದ ಪ್ರಭುಶೇಖರ್ ಎಂಬವರ ಮನೆಗೆ ಅಕ್ರಮ ಪ್ರವೇಶ ಮಾಡಿ ಕತ್ತಿಯಿಂದ ಪ್ರಭುಶೇಖರ್ ತಲೆಗೆ ಕಡಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಕುರಿತು ಗಾಯಾಳು ಸಿದ್ದಾಪುರ ಪೊಲೀಸ್ ಠಾಣೆಗೆ ಪುಕಾರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಬಲೆಬೀಸಿದ್ದಾರೆ.