ಮಡಿಕೇರಿ, ಜೂ. 28: ಭಾರತ ಸರ್ಕಾರದಿಂದ ವಿಶೇಷಚೇತನರಿಗೆ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ-ಯೂನಿಕ್ ಡಿಸೆಬಿಲಿಟಿ ಐಡಿ) ಯೋಜನೆಯಂತೆ ವಿಶೇಷಚೇತನರಿಗೆ ಸಮಗ್ರ ಮಾಹಿತಿ ಹೊಂದಿದ ಚೀಟಿ ಒದಗುತ್ತಿದೆ.
ಇದರಲ್ಲಿ ವಿಶೇಷಚೇತನ ವ್ಯಕ್ತಿಯ ವಿವರಗಳು ಹಾಗೂ ಅವರಲ್ಲಿರುವ ವಿಕಲತೆಯ ವಿವರ ಮತ್ತು ಪ್ರಮಾಣ ನಮೂದಿಸಲಾಗುತ್ತದೆ. ಯೋಜನೆಯು ದೇಶದ ವಿಶೇಷಚೇತನರ ಅಂಕಿ ಸಂಖ್ಯೆಗಳ ಮಾಹಿತಿ ನೀಡುತ್ತದೆ. ಸರ್ಕಾರದ ಸೌಲಭ್ಯಗಳು ಪರಿಣಾಮ ಕಾರಿಯಾಗಿ ವಿಶೇಷಚೇತನರಿಗೆ ತಲುಪುವಂತೆ ಮಾಡುವದು ಇದರ ಉದ್ದೇಶವಾಗಿದೆ. ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ಅಂಗವಿಕಲರು ಸೌಲಭ್ಯಗಳನ್ನು ಪಡೆಯುವಲ್ಲಿ ಪಾರದರ್ಶಕತೆ ಕಾಪಾಡುವದು ಹಾಗೂ ಅವರ ಸಾಮಾಜಿಕ ಹಾಗೂ ಆರ್ಥಿಕ ಚಿತ್ರಣವನ್ನು ನೀಡಲು ಸಹಕಾರಿ ಯಾಗಲಿದೆ. ಚೀಟಿಯು ಆಧಾರ್ ಕಾರ್ಡ್‍ನಷ್ಟೇ ಪ್ರಮುಖ ದಾಖಲೆ ಯಾಗಿದೆ. ಈ ಯೋಜನೆಯನ್ನು ಸರ್ಕಾರ 2019 ರಿಂದ ಕಡ್ಡಾಯಗೊಳಿಸಿದೆ. ಪ್ರತಿಯೊಬ್ಬ ವಿಶೇಷಚೇತನ ವ್ಯಕ್ತಿಯು ಯೋಜನೆಯಡಿ ನೋಂದಣಿ ಮಾಡಿಕೊಂಡು ಚೀಟಿಯನ್ನು ಪಡೆದುಕೊಳ್ಳುವಂತೆ ತಿಳಿಸಿದೆ ಎಂದು ಜಿಲ್ಲಾ ವಿಶೇಷಚೇತನ ಸಬಲೀಕರಣ ಅಧಿಕಾರಿ ಆರ್.ಸಂಪತ್ ಕುಮಾರ್ ಅವರು ತಿಳಿಸಿದ್ದಾರೆ.
ಪ್ರಯೋಜನಗಳು: ವಿಶೇಷಚೇತನ ವ್ಯಕ್ತಿಯ ವಿಕಲತೆಗೆ ಸಂಬಂಧಿಸಿದ ಮುಖ್ಯ ದಾಖಲೆಯನ್ನು ಇದು ಹೊಂದಿರುವದರಿಂದ ದೇಶವ್ಯಾಪ್ತಿ ಮಾನ್ಯತೆ ಇದೆ. ಈ ಕಾರ್ಡ್‍ನ್ನು ಭಾರತಾದ್ಯಂತ ವಿಶೇಷಚೇತನ ವ್ಯಕ್ತಿಗಳ ಅಂಗವೈಕಲ್ಯತೆಯ ಪುರಾವೆಯಾಗಿ ಪರಿಗಣಿಸಲಾಗುತ್ತದೆ. ವಿಶೇಷಚೇತನ ವ್ಯಕ್ತಿಯ ಮಾಹಿತಿಯು ದುರ್ಬಳಕೆಯಾಗಿ ಬೇರೆ ವ್ಯಕ್ತಿ ಈ ವಿಶೇಷಚೇತನರಿಗಿರುವ ಸೌಲಭ್ಯವನ್ನು ಬಳಸಲು ಅವಕಾಶವಿರುವುದಿಲ್ಲ. ಅಂಗವಿಕಲ ಕಾಯ್ದೆ 2016ರ ಅನ್ವಯ ನಿರ್ದಿಷ್ಟ ಪ್ರಮಾಣದ ಅಂಗವಿಕಲ ವ್ಯಕ್ತಿಯು ಮಾತ್ರ ಗುರುತಿಸಿಕೊಂಡು ಸೌಲಭ್ಯಗಳು ಅವರಿಗೆ ಮಾತ್ರ ಮೀಸಲಿಡುವಲ್ಲಿ ಅನುವು ಮಾಡಿಕೊಡುವದು. ಆನ್‍ಲೈನ್ ಮುಖಾಂತರ ಮಾಹಿತಿ ತುಂಬಿ ಕಾರ್ಡ್ ಪಡೆದುಕೊಳ್ಳುವದರಿಂದ ಯಾವದೇ ವ್ಯಕ್ತಿಯ ಮಾಹಿತಿಗಳನ್ನು ನಕಲಿ ದಾಖಲೆಗಳಾಗಿ ಪಡೆದು ಕೊಳ್ಳಲು ಆಗುವದಿಲ್ಲ. ಅರ್ಜಿಯನ್ನು ವೆಬ್‍ಸೈಟ್ ತಿತಿತಿ. sತಿಚಿvಟಚಿmbಚಿಟಿಛಿಚಿಡಿಜ.gov.iಟಿ ನಲ್ಲಿ ಪಡೆಯಬಹುದು. ಮಾಹಿತಿಯನ್ನು ತುಂಬಲು ಬೇಕಾದ ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡುವದು.
ಬೇಕಾದ ದಾಖಲೆಗಳು: ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ವಿಕಲಚೇತನ ವ್ಯಕ್ತಿಯ ಸಹಿ, ಹೆಬ್ಬೆರಳಿನ ಗುರುತು, ಹಿಂದುಳಿದ ಜಾತಿ, ವರ್ಗಕ್ಕೆ ಸೇರಿದವರಾಗಿದ್ದಲ್ಲಿ ಜಾತಿ ಪ್ರಮಾಣಪತ್ರ, ಅಂಗವಿಕಲತೆಯ ವೈದ್ಯಕೀಯ ಪ್ರಮಾಣಪತ್ರ, ಆಧಾರ್ ಕಾರ್ಡ್, ಯಾವದಾದರೊಂದು ವಿಳಾಸದ ದಾಖಲೆ (ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಇತ್ಯಾದಿ), ಈಗಾಗಲೇ ಅಂಗವಿಕಲತೆ ಯ ವೈದ್ಯಕೀಯ ಪ್ರಮಾಣ ಪತ್ರ ಹೊಂದಿರುವವರು ಕೂಡ ಕಾರ್ಡ್ ಪಡೆಯಲು ನೋಂದಾಯಿಸಿ ಕೊಳ್ಳಬೇಕಾಗುತ್ತದೆ. ವಿಶೇಷಚೇತನ ವ್ಯಕ್ತಿಯ ವೈದ್ಯಕೀಯ ಗುರುತಿನ ಚೀಟಿ ಯನ್ನು ಇದುವರೆಗೆ ಮಾಡಿಸದಿದ್ದಲ್ಲಿ ಅಥವಾ ಹೊಸದಾಗಿ ಮಾಡಿಸುವ ದಾದರೆ ಯುಡಿಐಟಿ ನಮೂನೆಯಲ್ಲಿ ವೈದ್ಯಕೀಯ ಗುರುತಿನ ಚೀಟಿ ಇಲ್ಲ ಎಂದು ನಮೂದಿಸಬೇಕು.
ಅಂತಿಮವಾಗಿ ಅಭ್ಯರ್ಥಿಗಳು ನೋಂದಣಿ ಮಾಡಿದ ನಮೂನೆಯಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬೇಕು. ಹಾಗೂ ನಮೂನೆಯಲ್ಲಿ ನೋಂದಾಯಿಸಿದ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸಕ್ಕೆ ಸಂದೇಶವು ರವಾನೆಯಾಗುವದು. ಆನ್‍ಲೈನ್ ಮುಖಾಂತರ ನಮೂನೆಯನ್ನು ತುಂಬುವದರಿಂದ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಅಂಗವಿಕಲತೆಯ ವೈದ್ಯಕೀಯ ಪ್ರಮಾಣ ಪತ್ರ ನೀಡುವ ಸೌಲಭ್ಯವು ಪ್ರಸ್ತುತ ಲಭ್ಯವಿಲ್ಲ.
ಆನ್‍ಲೈನ್ ಮುಖಾಂತರ ಭರ್ತಿ ಮಾಡಿ ಕಳುಹಿಸಿದ ನಮೂನೆಯನ್ನು ಜಿಲ್ಲಾ ವೈದ್ಯಕೀಯ ಪ್ರಾಧಿಕಾರವು ಪರಿಶೀಲಿಸಿ ಅಗತ್ಯವಿದ್ದಲ್ಲಿ ಅಭ್ಯರ್ಥಿ ಯನ್ನು ಜಿಲ್ಲಾಸ್ಪತ್ರೆಗೆ ಪರಿಶೀಲನೆಗೆ ಬರಲು ತಿಳಿಸುವರು. ಅವರು ತಿಳಿಸಿದ ದಿನಾಂಕದಂದು ಅಭ್ಯರ್ಥಿಯು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು. ಆನ್‍ಲೈನ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ನಮೂದಿಸಿದ ವಿಳಾಸಕ್ಕೆ ಅಂಚೆಯ ಮೂಲಕ ಕಾರ್ಡ್ ತಲುಪಿಸ ಲಾಗುವದು. ಹೆಚ್ಚಿನ ಮಾಹಿತಿಗೆ ದೂ.08272-222830 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್.ಸಂಪತ್ ಕುಮಾರ್ ಅವರು ತಿಳಿಸಿದ್ದಾರೆ.