ಕುಶಾಲನಗರ, ಜೂ. 28: ಕುಶಾಲನಗರ ಸಮೀಪ ಗುಡ್ಡೆಹೊಸೂರು ಬಳಿ ಹೆದ್ದಾರಿ ಒತ್ತಿನಲ್ಲಿರುವ ಕೈಗಾರಿಕಾ ಘಟಕದೊಳಗೆ ಸೇರಿಕೊಂಡಿದ್ದ ಬೃಹತ್ ಗಾತ್ರದ ನಾಗರಹಾವನ್ನು ಕುಶಾಲನಗರದ ಸ್ನೇಕ್ ರತನ್ ಸೆರೆಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
10 ಅಡಿಗಿಂತಲೂ ಉದ್ದದ ನಾಗರಹಾವು ಗುಡ್ಡೆಹೊಸೂರಿನ ಸಿಮೆಂಟ್ ಪ್ರಾಡಕ್ಟ್ಸ್ ತಯಾರಿಕಾ ಘಟಕದ ಒಳಗೆ ಸೇರಿಕೊಂಡಿರುವ ಬಗ್ಗೆ ಮಾಹಿತಿ ದೊರೆತು ಸ್ಥಳಕ್ಕೆ ತೆರಳಿದ ಕೋರಕುಟ್ಟಿರ ರತನ್ ಅಡಗಿ ಕುಳಿತಿದ್ದ ನಾಗರಹಾವನ್ನು ಹಿಡಿದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಸಮೀಪದ ಆನೆಕಾಡು ಮೀಸಲು ಅರಣ್ಯಕ್ಕೆ ಸುರಕ್ಷಿತವಾಗಿ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.