ಮಡಿಕೇರಿ, ಜೂ.28 : ಐಬಿಪಿಎಸ್ ಅವರು ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ ಖಾಲಿಯಿರುವ ಪ್ರೊಬೇಷನರಿ ಅಧಿಕಾರಿ ಮತ್ತು ಮ್ಯಾನೇಜ್‍ಮೆಂಟ್ ಟ್ರೈನಿ ಗುಮಾಸ್ತರ ಹುದ್ದೆಗಳಿಗೆ 2019 ನೇ ಸಾಲಿನಲ್ಲಿ ನಡೆಸುವ ಸಾಮಾನ್ಯ ಲಿಖಿತ ಪರೀಕ್ಷೆಗಳಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಉಚಿತ ಪರೀಕ್ಷಾ ಪೂರ್ವ ತರಬೇತಿಯು ಜುಲೈ 5 ರಿಂದ 14 ರವರೆಗೆ ನಡೆಯಲಿದೆ.
ಪರೀಕ್ಷಾ ಪೂರ್ವ ತರಬೇತಿಯಲ್ಲಿ ಹುದ್ದೆಗಳಿಗೆ ಐಬಿಪಿಎಸ್ ಇವರು ನಿಗದಿಪಡಿಸಿರುವ ಪಠ್ಯಕ್ರಮಕ್ಕೆ ಅನುಗುಣವಾಗಿ ಗುಣಮಟ್ಟದ ತರಬೇತಿಯನ್ನು ನೀಡಲಾಗುವದು. ಪರೀಕ್ಷಾ ಪೂರ್ವ ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ತಮ್ಮ ಹೆಸರನ್ನು ಖುದ್ದಾಗಿ ಮತ್ತು ಅಂಚೆ ಕಾರ್ಡಿನ ಮುಖಾಂತರ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕಾಗಿ ಉದ್ಯೋಗಾಧಿಕಾರಿ ಅವರು ತಿಳಿಸಿದ್ದಾರೆ.