ಚೆಟ್ಟಳ್ಳಿ, ಜೂ. 27: ಕಳೆದ ವರ್ಷ ಜಲಪ್ರಳಯದಿಂದ ತತ್ತರಿಸಿದ್ದ ಮಕ್ಕಂದೂರು ಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿಗಳ ನೆರವಿಗೆ ಆಸ್ಟ್ರೇಲಿಯಾದ ಸಿಡ್ನಿ ಕೊಡವ ಕೂಟ ಮುಂದಾಗಿದೆ. ಶಾಲೆಯ 55 ವಿದ್ಯಾರ್ಥಿಗಳಿಗೆ ತಾ. 27 ರಂದು (ಇಂದು) ಸಮವಸ್ತ್ರ, ಸ್ವೆಟರ್ ಮತ್ತು ಪಾದರಕ್ಷೆಗಳನ್ನು ಶಾಲೆಯಲ್ಲಿ ವಿತರಿಸಲಾಗುತ್ತದೆ.

ಉಪವಿಭಾಗಾಧಿಕಾರಿ ಜವರೇಗೌಡ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಸಮವಸ್ತ್ರಗಳನ್ನು ವಿತರಿಸಲಿದ್ದಾರೆ. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ, ಅನಿವಾಸಿ ಭಾರತೀಯ ಜಗದೀಶ್ ಐಮಂಡ, ಕಾರ್ಯಕ್ರಮ ಸಂಯೋಜಕ ಐಮಂಡ ಗೋಪಾಲ್ ಸೋಮಯ್ಯ ಉಪಸ್ಥಿತರಿರುತ್ತಾರೆ.