ವೀರಾಜಪೇಟೆ ಜೂ. 26: ವೀರಾಜಪೇಟೆ ರೋಟರಿ ಕ್ಲಬ್ ಅಧ್ಯಕ್ಷರಾಗಿ ಕೆ.ಎಚ್. ಆದಿತ್ಯ, ಕಾರ್ಯದರ್ಶಿಯಾಗಿ ಭರತ್‍ರಾಮ್‍ರೈ ಆಯ್ಕೆಯಾಗಿದ್ದಾರೆ.

ಕಾರ್ಯವಾಹಕ ಕಾರ್ಯದರ್ಶಿಯಾಗಿ ಬಿ. ಬಿ. ಮಾದಪ್ಪ, ಖಜಾಂಜಿಯಾಗಿ ಡಾ. ಲವೀನ್ ಚೆಂಗಪ್ಪ, ಸಾರ್ಜೆಂಟ್ ಆಗಿ ಚೇತನ್ ಮುತ್ತಣ್ಣ, ಕ್ಲಬ್ ಸೇವಾ ನಿರ್ದೇಶಕರಾಗಿ ಪ್ರತ್ವಿ ಮಾದಯ್ಯ, ಸಮುದಾಯ ಸೇವಾ ನಿರ್ದೇಶಕರಾಗಿ ವಿಕಾರ್‍ಖಾನ್, ಅಂತರ್ರಾಷ್ಟ್ರೀಯ ಸೇವಾ ಯೋಜನೆ ನಿರ್ದೇಶಕರಾಗಿ ಡಾ. ನರಸಿಂಹನ್, ವೃತ್ತಿಪರ ನಿರ್ದೇಶಕರಾಗಿ ಬನ್ಸಿ ಪೂವಣ್ಣ, ಯುವ ಸೇವಾ ನಿರ್ದೇಶಕರಾಗಿ ಪ್ರವೀಣ್ ಚೆಂಗಪ್ಪ, ಪಲ್ಸ್ ಪೋಲಿಯೋ ಯೋಜನೆ ಮುಖ್ಯಸ್ಥರಾಗಿ ಡಾ. ಉತ್ತಪ್ಪ, ಟಿಆರ್‍ಎಫ್ ಮುಖ್ಯಸ್ಥರಾಗಿ ಪಿ. ಎಸ್. ಅಯ್ಯಣ್ಣ, ಜಿಲ್ಲಾ ಯೋಜನಾ ಮುಖ್ಯಸ್ಥರಾಗಿ ಬಿ. ಬಿ. ಮಾದಪ್ಪ, ತರಬೇತಿ ಮುಖ್ಯಸ್ಥರಾಗಿ ಸತೀಶ್ ಗಣಪತಿ, ವಿನ್ಸ್ ಮುಖ್ಯಸ್ಥರಾಗಿ ಶಾಂತರಾಮ್ ಕಾಮತ್, ಸದಸ್ಯತ್ವ ಅಭಿವೃದ್ಧಿ ಸಮಿತಿ ಮುಖ್ಯಸ್ಥರಾಗಿ ರವಿ ಆಯ್ಕೆಯಾಗಿದ್ದಾರೆ.