ಚೆಟ್ಟಳ್ಳಿ, ಜೂ. 26: ಕಸವನ್ನು ಎತ್ತುವದು ಮಾತ್ರವಲ್ಲ ಎಲ್ಲೆಂದರಲ್ಲಿ ಕಸವನ್ನು ಹಾಕದೇ ಇರುವದಾಗಿದೆ ನಿಜವಾದ ಸ್ವಚ್ಛತೆ ಎಂದು ಟೀಂ ಡೋಮಿನೋಸ್ ಅಧ್ಯಕ್ಷ ಶೌಕತ್ ಹೇಳಿದರು.

ಸಿದ್ದಾಪುರ ಸಮೀಪದ ಅಮ್ಮತ್ತಿ ನಾಡಿನ ಸ್ವಚ್ಛತಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಅಮ್ಮತ್ತಿ ಪ್ರೌಢಶಾಲಾ ಪ್ರಾಂಶುಪಾಲ ಸದಾನಂದ, ಆಶಿಫ್, ರೋನಾ ಭೀಮಯ್ಯ, ಅಭಿಜಿತ್, ರದೀಶ್ ಸೇರಿದಂತೆ ಸಂಘದ ಕಾರ್ಯಕರ್ತರು ಹಾಗೂ ಅಮ್ಮತ್ತಿ ಗ್ರಾಮಸ್ಥರು ಇದ್ದರು.