ಸೋಮವಾರಪೇಟೆ, ಜೂ. 26: ಕಳೆದ ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆಯನ್ನು ಕಳೆದುಕೊಂಡ ಬಜೆಗುಂಡಿಯ ನಿವಾಸಿ ರವಿ ಅವರಿಗೆ ಸೋಮವಾರಪೇಟೆ ಮತ್ತು ಶನಿವಾರಸಂತೆ ರೋಟರಿ ಸಂಸ್ಥೆ ವತಿಯಿಂದ ರೂ. 5 ಲಕ್ಷ ಮೊತ್ತದ ಮನೆಯನ್ನು ನಿರ್ಮಿಸುವ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.
ರೋಟರಿ 3181 ಜಿಲ್ಲಾ ರಾಜ್ಯಪಾಲ ಪಿ. ರೋಹಿನಾಥ್ ಅವರು ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭ ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ್, ಸೋಮವಾರಪೇಟೆ ರೋಟರಿ ಹಿಲ್ಸ್‍ನ ಅಧ್ಯಕ್ಷ ಪಿ.ಕೆ. ರವಿ, ಶನಿವಾರಸಂತೆ ರೋಟರಿ ಸಂಸ್ಥೆಯ ಅಧ್ಯಕ್ಷ ಪುರಷೋತ್ತಮ್, ಪದಾಧಿಕಾರಿಗಳಾದ ಡಿ.ಪಿ. ರಮೇಶ್, ಬಿ.ಎಸ್. ಸುಂದರ್ ಮತ್ತಿತರರು ಉಪಸ್ಥಿತರಿದ್ದರು.