ಶನಿವಾರಸಂತೆ, ಜೂ. 25: ಗಾರೆಕಟ್ಟೆ ಎಂಬಲ್ಲಿ ನೀರಿನ ತೋಡಿನಿಂದ ಅಕ್ರಮವಾಗಿ ಮರಳು ಸಂಗ್ರಹಿಸಿಟ್ಟು ಮಂಗಳವಾರ ಬೆಳಗ್ಗಿನ ಜಾವ ಟ್ರ್ಯಾಕ್ಟರ್ (ನಂ. ಕೆ.ಎ. 12. ಟಿ. 7726)ನಲ್ಲಿ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿಯ ಮೇರೆ ವೃತ್ತ ನಿರೀಕ್ಷಕ ನಂಜುಂಡೇಗೌಡ ಮಾರ್ಗದರ್ಶನದಲ್ಲಿ ಶನಿವಾರಸಂತೆ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಟ್ರ್ಯಾಕ್ಟರ್‍ನ್ನು ವಶಪಡಿಸಿಕೊಂಡಿದ್ದು, ಆರೋಪಿ ಪರಾರಿಯಾಗಿದ್ದಾನೆ.