ನಾಪೆÇೀಕ್ಲು, ಜೂ. 24: ವೀರಾಜಪೇಟೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ನರಿಯಂದಡ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಯವಕಪಾಡಿಯಲ್ಲಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಪದ್ಧತಿ ತಳಿಯ ಬಗೆಗಿನ ಬೀಜದ ಆಯ್ಕೆ, ಪ್ರಮಾಣ, ಸಸಿಮಡಿ ತಯಾರಿ, ನಾಟಿ ಪ್ರಕ್ರಿಯೆ, ಮಾರ್ಕರ್, ಕೋನೋವೀಡರನ್ನು ಉಪಯೋಗಿಸುವ ವಿಧಾನ, ಗೊಬ್ಬರ ನೀಡುವ ಹಂತಗಳು, ಮುಂತಾದ ಮಾಹಿತಿಗಳನ್ನು ರೈತರಿಗೆ ನೀಡಲಾಯಿತು.
ಈ ಸಂದರ್ಭ ಸಿಹೆಚ್‍ಎಸ್‍ಸಿ ಪ್ರಬಂಧಕಿ ಪೂರ್ಣಿಮಾ, ವಲಯ ಮೇಲ್ವಿಚಾರಕ ಸಂತೋಷ್, ಕೃಷಿ ಮೇಲ್ವಿಚಾರಕ ಚೇತನ್ ಕೆ, ಸೇವಾ ಪ್ರತಿನಿಧಿ ಪ್ರಭಾ ಮತ್ತಿತರರು ಇದ್ದರು.